Thursday, May 9, 2024
spot_imgspot_img
spot_imgspot_img

ಬೇಸಿಗೆಯಲ್ಲಿ ತುಪ್ಪ ಸೇವನೆಯ ಪ್ರಯೋಜನಗಳೇನು? ಇಲ್ಲಿದೆ ಉಪಯುಕ್ತ ಮಾಹಿತಿ

- Advertisement -G L Acharya panikkar
- Advertisement -

ಶಕ್ತಿ ವರ್ಧಕ: ತುಪ್ಪದಲ್ಲಿ ಇರುವ ಆರೋಗ್ಯಕರ ಕೊಬ್ಬಿನ ಅಂಶ ದೇಹಕ್ಕೆ ಪ್ರಯೋಜನಕಾರಿ ಆಗಿದೆ. ಇದನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ತುಪ್ಪ ತಿನ್ನುವುದರಿಂದ ದೇಹದಲ್ಲಿ ಪೋಷಕಾಂಶಗಳು ಉತ್ತಮವಾಗಿ ಹೀರಲ್ಪಡುತ್ತದೆ ಎಂದೂ ಹೇಳಲಾಗುತ್ತದೆ.

ತ್ವಚೆಯ ಸೌಂದರ್ಯ: ಬೇಸಿಗೆಯಲ್ಲಿ ದೇಹ ನಿರ್ಜಲೀಕರಣ ಆಗುವ ಸಮಸ್ಯೆ ಸಾಮಾನ್ಯವಾಗಿದೆ. ಏಕೆಂದರೆ ಈ ಸಮಯದಲ್ಲಿ ಅತಿಯಾದ ಬೆವರುವಿಕೆ, ಬಿಸಿಲು, ಸುಸ್ತು ಇರುತ್ತದೆ. ನಿಯಮಿತವಾಗಿ ತುಪ್ಪವನ್ನು ಸೇವಿಸುವುದರಿಂದ ಈ ನಿರ್ಜಲೀಕರಣದ ಸಮಸ್ಯೆಯನ್ನು ತಪ್ಪಿಸಬಹುದು. ಬೇಕಾದಲ್ಲಿ ತುಪ್ಪವನ್ನು ತ್ವಚೆಗೆ ಸವರುವುದರಿಂದ ಚರ್ಮವನ್ನು ಇನ್ನಷ್ಟು ತೇವಾಂಶದಿಂದ ಇರಿಸಿಕೊಳ್ಳಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು: ದೇಹದಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಂಡಾಗ ರೋಗಗಳು ನಮ್ಮನ್ನು ತಮ್ಮ ಹಿಡಿತಕ್ಕೆ ಎಳೆದುಕೊಂಡು ಬಿಡುತ್ತವೆ. ತುಪ್ಪದಲ್ಲಿ ಇರುವ ಗುಣಲಕ್ಷಣಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಆಹಾರ ಪದಾರ್ಥದಲ್ಲಿ ಒಳ್ಳೆಯ ಗುಣಮಟ್ಟದ ತುಪ್ಪ ಬಳಸುವುದರಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.

ಹೊಟ್ಟೆಯ ಆರೋಗ್ಯ: ತುಪ್ಪ ಸೇವನೆಯಿಂದ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಉಳಿಯುತ್ತದೆ. ಈ ಬಗ್ಗೆ ಆಯುರ್ವೇದದಲ್ಲಿ ಕೂಡ ತಿಳಿಸಲಾಗಿದೆ. ಬೇಸಿಗೆಯಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಪ್ರತಿದಿನ ತುಪ್ಪದಿಂದ ಮಾಡಿದ ಪದಾರ್ಥಗಳನ್ನು ಸೇವನೆ ಮಾಡಿ. ಇದು ನಿಮಗೆ ಆರೋಗ್ಯಕರ ಪ್ರಯೋಜನ ನೀಡುತ್ತದೆ.

ಮೂಳೆ ಆರೋಗ್ಯ: ತುಪ್ಪವು ಮೂಳೆಗಳ ಆರೋಗ್ಯಕ್ಕೆ ಕೂಡ ಪ್ರಯೋಜನಕಾರಿ ಆಗಿದೆ. ವಾಸ್ತವವಾಗಿ ಮೂಳೆಗಳಿಗೆ ಅಗತ್ಯವಾದ ವಿಟಮಿನ್ ಕೆ 2 ತುಪ್ಪದಲ್ಲಿ ಹೇರಳವಾಗಿ ಲಭ್ಯವಿದೆ. ಇದು ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಸಹಾಯ ಮಾಡುತ್ತದೆ. ತುಪ್ಪ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತದೆ.

vtv vitla
vtv vitla
- Advertisement -

Related news

error: Content is protected !!