Wednesday, June 24, 2026
spot_imgspot_img
spot_imgspot_img

ನಗರಗಳಲ್ಲಿ ಸ್ವಚ್ಛ ಭಾರತ ಮಿಷನ್ 2.0 ಗೆ ಇಂದು ಪ್ರಧಾನಿ ಮೋದಿಯವರಿಂದ ಚಾಲನೆ

- Advertisement -
- Advertisement -
driving

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಅಕ್ಟೋಬರ್ 1) ಬೆಳಗ್ಗೆ 11ಕ್ಕೆ ನಗರ ವಿಭಾಗದ ಸ್ವಚ್ಛ ಭಾರತ ಮಿಷನ್ 2.0 ಮತ್ತು ಅಮೃತ್ 2.0 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ದೇಶದ ಎಲ್ಲ ನಗರಗಳನ್ನೂ ಕಸಮುಕ್ತಗೊಳಿಸುವ ಮತ್ತು ನೀರಿನ ಮೂಲಗಳ ಸುರಕ್ಷಿತವಾಗಿರಿಸುವ ಉದ್ದೇಶದ ಮೇರೆಗೆ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ.

2009ರಲ್ಲಿ ಜಾರಿಗೆ ಬಂದಿದ್ದ ನಿರ್ಮಲ ಭಾರತ ಯೋಜನೆಯು ಅಷ್ಟು ಪರಿಣಾಮಕಾರಿಯಾಗಿ ಜಾರಿಗೊಳ್ಳದ ಕಾರಣ 2014ರ ಅಕ್ಟೋಬರ್ 2 ಗಾಂಧೀ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸ್ವಚ್ಛ ಭಾರತ ಯೋಜನೆಯನ್ನು ದೇಶದಾದ್ಯಂತ ಅನುಷ್ಠಾನಕ್ಕೆ ತಂದಿತು. 2019ಕ್ಕೆ ಸ್ವಚ್ಛ ಭಾರತ್ ಮಿಶನ್ ಮೊದಲನೇ ಹಂತ ಮುಕ್ತಾಯಗೊಂಡಿದ್ದು 2020-2021ರಿಂದ 2024-2025ರವರೆಗೆ ಸ್ವಚ್ಛ ಭಾರತ್ ಯೋಜನೆಯ 2ನೇ ಹಂತ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಸ್ವಚ್ಛ ಭಾರತ್ ಯೋಜನೆಯನ್ನು ಗ್ರಾಮೀಣ ಮತ್ತು ನಗರಗಳೆಂಬ ಎರಡು ವಿಭಾಗ ಮಾಡಲಾಗಿದೆ. ಕುಡಿಯುವ ನೀರಿನ ಸ್ವಚ್ಛತೆ, ಘನ ತ್ಯಾಜ್ಯ ನಿರ್ವಹಣೆಯೇ ಮೊದಲಾದ ಹಲವು ಕಾರ್ಯಗಳನ್ನು ಈ ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಸ್ವಚ್ಛ ಭಾರತ ಯೋಜನೆಯಡಿ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಅತ್ಯಂತ ಮಹತ್ವ ನೀಡಲಾಗಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವಚ್ಛತಾ ಕಾರ್ಯಕ್ಕಿಳಿದಿದ್ದರು.

- Advertisement -

Related news

error: Content is protected !!