Tuesday, May 7, 2024
spot_imgspot_img
spot_imgspot_img

ನಟಿ ರಂಭಾ ಕಾರು ಅಪಘಾತ; ಮಗಳ ಸ್ಥಿತಿ ಗಂಭೀರ

- Advertisement -G L Acharya panikkar
- Advertisement -

ತೊಂಬತ್ತರ ದಶಕದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಮಿಂಚಿದ ನಟಿ ರಂಭಾ ಸದ್ಯ ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರೊಂಟೊದಲ್ಲಿ ನೆಲೆಸಿದ್ದಾರೆ. 2010ರಲ್ಲಿ ಇಂದ್ರಕುಮಾರ್ ಪದ್ಮನಾಥನ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ರಂಭಾಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ.

ಸದ್ಯ ಟೊರೊಂಟೊದಲ್ಲಿರುವ ರಂಭಾ ಹಾಗೂ ಇಂದ್ರಕುಮಾರ್ ಮಕ್ಕಳಿಗೆ ಅಲ್ಲಿಯೇ ಶಿಕ್ಷಣ ಕೊಡಿಸುತ್ತಿದ್ದಾರೆ.

ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ರಂಭಾ ಕಾರು ಅಪಘಾತಕ್ಕೀಡಾಗಿದೆ. ರಂಭಾ ಚಲಾಯಿಸುತ್ತಿದ್ದ ಕಾರಿಗೆ ಬಲ ಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ರಂಭಾ ಜತೆ ಕಾರಿನಲ್ಲಿ ತನ್ನ ಮಕ್ಕಳು ಹಾಗೂ ಮಕ್ಕಳನ್ನು ನೋಡಿಕೊಳ್ಳುವ ಕೆಲಸದಾಕೆ ಇದ್ದರು. ಈ ಪೈಕಿ ಎಲ್ಲರಿಗೂ ಚಿಕ್ಕ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದೇವೆ, ಆದರೆ ಕಿರಿಯ ಪುತ್ರಿ ಸಾಶಾ ಮಾತ್ರ ಇನ್ನೂ ಸಹ ಆಸ್ಪತ್ರೆಯಲ್ಲಿಯೇ ಇದ್ದಾಳೆ ಎಂದು ನಟಿ ರಂಭಾ ಸ್ವತಃ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು ರಂಭಾ ಅವರ ಟೆಸ್ಲಾ ಕಾರಿನ ಬಲಭಾಗದ ಮುಂದಿನ ಬಾಗಿಲಿಗೆ ಪೆಟ್ಟಾಗಿದ್ದು, ಕಾರು ಡಿಕ್ಕಿಯಾದ ರಭಸಕ್ಕೆ ಏರ್ ಬ್ಯಾಗ್ ತೆರೆದುಕೊಂಡಿರುವುದನ್ನು ನಟಿ ಹಂಚಿಕೊಂಡಿರುವ ಚಿತ್ರಗಳಲ್ಲಿ ಕಾಣಬಹುದಾಗಿದೆ. ಹೀಗೆ ಅಪಘಾತದ ವಿಷಯವನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ರಂಭಾ ನಿಮ್ಮ ಪ್ರಾರ್ಥನೆ ನಮಗೆ ಅತಿಮುಖ್ಯ ಮಗಳು ಬೇಗನೇ ಗುಣಮುಖಳಾಗಲಿ ಎಂದು ಬೇಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

vtv vitla
- Advertisement -

Related news

error: Content is protected !!