Thursday, May 2, 2024
spot_imgspot_img
spot_imgspot_img

ನಟ, ಕುಸಲ್ದರಸೆ ನವೀನ್‌ ಡಿ ಪಡೀಲ್‌ಗೆ ಮಾತೃವಿಯೋಗ

- Advertisement -G L Acharya panikkar
- Advertisement -

ಮಂಗಳೂರು: ಚಿತ್ರ ನಟ ಹಾಗೂ ರಂಗಕರ್ಮಿ ನವೀನ್‌ ಡಿ ಪಡೀಲ್‌ ಅವರ ತಾಯಿ ಸೇಸಮ್ಮ ಕೋಟ್ಯಾನ್‌ (80) ನಗರದ ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಅವರು ನವೀನ್‌ ಡಿ.ಪಡೀಲ್‌ ಅವರ ಪಡೀಲ್‌ನ ಮನೆಯಲ್ಲೇ ವಾಸವಿದ್ದರು. ಅವರಿಗೆ ನಾಲ್ಕು ವರ್ಷಗಳ ಹಿಂದೆ ಅಪಘಾತದಲ್ಲಿ ಮೂಳೆ ಮುರಿತಕ್ಕೆ ಒಳಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಅವರ ಆರೋಗ್ಯ ಸುಧಾರಿಸಿತ್ತು.

ಎರಡು ತಿಂಗಳಿಂದ ಅವರ ಆರೋಗ್ಯ ಮತ್ತೆ ಹದಗೆಟ್ಟಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಇಬ್ಬರು ಪುತ್ರರು ನವೀನ್‌ , ದಯಾನಂದ ಹಾಗೂ ಪುತ್ರಿ ಮೋಹಿನಿ ಅವರನ್ನು ಅಗಲಿದ್ದಾರೆ.

- Advertisement -

Related news

error: Content is protected !!