Thursday, May 9, 2024
spot_imgspot_img
spot_imgspot_img

ನಡುರಸ್ತೆಯಲ್ಲಿ ಯುವತಿಯನ್ನು ವಿವಸ್ತ್ರಗೊಳಿಸಿರುವ ಯುವಕ

- Advertisement -G L Acharya panikkar
- Advertisement -

ತಾಯಿ ಜೊತೆಯಿರುವಾಗಲೇ ಯುವಕ ನಡುರಸ್ತೆಯಲ್ಲಿ ಯುವತಿಯನ್ನು ವಿವಸ್ತ್ರಗೊಳಿಸಿರುವ ಘಟನೆ ಹೈದರಾಬಾದ್‌ನ  ಜವಾಹರ್ ನಗರ ಪ್ರದೇಶದಲ್ಲಿ  ನಡೆದಿದೆ

ಮಕ್ಕಳ ಡೇಕೇರ್ ಸೆಂಟರ್‌ನಲ್ಲಿ ಕೆಲಸ ಮಾಡುವ ಯುವಕಿ ಶಾಪಿಂಗ್‌ಗೆ ಹೋಗುತ್ತಿದ್ದಾಗ ಬಾಲಾಜಿ ನಗರ ಮುಖ್ಯರಸ್ತೆಯಲ್ಲಿ ರಾತ್ರಿ 8 ಗಂಟೆಗೆ ಈ ಆಘಾತಕಾರಿ ಘಟನೆ ನಡೆದಿದೆ. ಆಕೆ ರಸ್ತೆ ದಾಟುತ್ತಿದ್ದಂತೆ, ಆ ವ್ಯಕ್ತಿ ಹಿಂದಿನಿಂದ ಅವಳ ಸೊಂಟವನ್ನು ಮುಟ್ಟಿರುವ ಕಾರಣ ಆಕೆ ಆತನಿಗೆ ಕಪಾಳಮೋಕ್ಷ ಮಾಡಿದ್ದಳು ಎಂದು ತಿಳಿದುಬಂದಿದೆ.
ನಡುರಸ್ತೆಯಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಹಾಗಾಗಿ ಪಕ್ಕದಲ್ಲಿದ್ದವರು ಮಧ್ಯ ಪ್ರವೇಶಿಸಲಿಲ್ಲ. ಆತ ರೊಚ್ಚಿಗೆದ್ದು ರಸ್ತೆಯಲ್ಲಿಯೇ ಆಕೆಯ ಬಟ್ಟೆ ಹರಿದು ಹಾಕಿದ್ದಾನೆ.

ಸುಮಾರು 15 ನಿಮಿಷಗಳ ನಂತರ, ಆರೋಪಿ ಮತ್ತು ಅವನ ತಾಯಿ ಹೊರಟುಹೋದಾಗ ಮಹಿಳೆಯೊಬ್ಬರು ಸಂತ್ರಸ್ತೆಯ ಮೈ ಮುಚ್ಚಲು ಸಹಾಯ ಮಾಡಿದ್ದಾರೆ.  ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಗೆ ಬಟ್ಟೆ ತೊಡಿಸಿ, ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರು.

ಸಂತ್ರಸ್ತೆಯ ದೂರಿನ ಮೇರೆಗೆ, ಪೊಲೀಸರು ಆರೋಪಿಗಳಾದ ಪಿ ಮಾರಯ್ಯ ಮತ್ತು ಅವರ ತಾಯಿ ನಾಗಮ್ಮ ಅವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾರಯ್ಯನನ್ನು ಸೋಮವಾರ ಬಂಧಿಸಲಾಗಿದೆ.

- Advertisement -

Related news

error: Content is protected !!