Monday, June 8, 2026
spot_imgspot_img
spot_imgspot_img

ನದಿಯ ದಡದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯನ್ನು ಕಚ್ಚಿ ತಿಂದ ಮೊಸಳೆ

- Advertisement -
- Advertisement -

ಒಡಿಶಾದ ಜಾಜ್‌ಪುರ ಜಿಲ್ಲೆಯ ಪಲತ್‌ಪುರ್ ಗ್ರಾಮದಲ್ಲಿ ಮೊಸಳೆಯೊಂದು ಮಹಿಳೆಯನ್ನು ಕಚ್ಚಿ ತಿಂದ ಘಟನೆ ನಡೆದಿದೆ.ಮಹಿಳೆ ಬಿರುಪಾ ನದಿಯ ದಡದಲ್ಲಿ ಸ್ನಾನ ಮಾಡುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಮೊಸಳೆ ನದಿಯಿಂದ ಹಾರಿ ಮಹಿಳೆಯನ್ನು ಹಿಡಿದೆಳಿದಿದೆ. ನಂತರ ಸ್ವಲ್ಪ ಆಳವಿರುವ ಭಾಗಕ್ಕೆ ಹೋಗಿ ಅಲ್ಲಿ ಆಕೆಯನ್ನು ಕಚ್ಚಿ ತಿಂದಿದೆ.

ಈ ಭಯಾನಕ ಘಟನೆಯನ್ನು ನದಿಯ ದಡದಿಂದ ನೋಡುತ್ತಿದ್ದವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿದ್ದಾರೆ.
ಸ್ಥಳೀಯ ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿಯನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಶೋಧ ಕಾರ್ಯಾಚರಣೆಯ ನಂತರ ಸಂತ್ರಸ್ತೆಯ ದೇಹವನ್ನು ನದಿಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!