Sunday, May 5, 2024
spot_imgspot_img
spot_imgspot_img

ನರ್ಸ್ ಸೋಗಿನಲ್ಲಿ ಬಂದಾಕೆ ಮಾಡಿದ್ದು ಅಂತಿಂಥಾ ಕೆಲಸವಲ್ಲ; ಖತರ್ನಾಕ್ ಯುವತಿಯ ಆಟ ಸಿಸಿಕ್ಯಾಮಾರದಲ್ಲಿ ಸೆರೆ

- Advertisement -G L Acharya panikkar
- Advertisement -

ನರ್ಸ್ ಎಂದು ಹೇಳಿ ಆಸ್ಪತ್ರೆಗಳಲ್ಲಿ ಸಿಕ್ಕಿದ್ದನೆಲ್ಲಾ ಕದ್ದು ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಕಳ್ಳಿಯ ಕೈ ಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳಿಯೊಬ್ಬಳ ಕೈಚಳಕದ ಆಟ ಬಟಾಬಯಲಾಗಿದೆ. ಅಲ್ಲದೆ ಡಾಕ್ಟರ್ ಎಂದು ಹೇಳಿಕೊಂಡು ರೋಗಿಯ ಮೈಮೇಲಿದ್ದ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾಳೆ. ಕಳ್ಳಿಯ ಕೈಚಳಕಕ್ಕೆ ಶಾಕ್ ಆದ ಆಸ್ಪತ್ರೆ ಆಡಳಿತ ಮಂಡಳಿ ಕಳ್ಳಿಯ ವಿರುದ್ಧ ದೂರು ನೀಡಿದ್ದಾರೆ.

ಅಶೋಕ ನಗರದಲ್ಲಿನ ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ರಮೇಶ್ ಎಂಬುವವರು ಅವರ ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅನಾರೋಗ್ಯ ಹಿನ್ನಲೆ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದರು. ಇದೇ ವೇಳೆ ಆಸ್ಪತ್ರೆಗೆ ನುಗ್ಗಿದ ಈ ಕಳ್ಳಿ ಆರೋಗ್ಯ ಪರಿಶೀಲನೆ ಮಾಡಬೇಕು ಆಚೆ ಹೋಗಿ ಎಂದು ರಮೇಶ್​ರನ್ನು ಆಚೆ ಕಳಿಸಿದ್ದಾಳೆ. ಬಳಿಕ ರಮೇಶ್ ತಾಯಿಯವರ ಕೈನಲ್ಲಿದ್ದ ಉಂಗುರ ಮತ್ತು ಕತ್ತಿನಲ್ಲಿದ್ದ ಸರ ಕದ್ದು ಎಸ್ಕೇಪ್ ಆಗಿದ್ದಾಳೆ.

ಎಲ್ಲಾ ಪ್ರಿ-ಪ್ಲ್ಯಾನಿಂಗ್..!
ಈ ಕಳ್ಳಿ ಮೊದಲೇ ಯಾವ ರೀತಿ ಕಳ್ಳತನ ಮಾಡಬೇಕೆಂದು ಸ್ಕೆಚ್ ಹಾಕಿಕೊಂಡೇ ಬಂದಿದ್ದಾಳೆ. ನಕಲಿ ಸರಗಳನ್ನು ಇಟ್ಟುಕೊಂಡು ಕಣ್ಣಿಗೆ ಮಣ್ಣೆರಚುವ ಪ್ಲ್ಯಾನ್ ಮಾಡಿದ್ದಾಳೆ. ಹೆಲ್ತ್ ಚೆಕ್ಕಿಂಗ್‌ಗೆ ಎಂದು ಬಂದಾಕೆ ಸರ ಕಿತ್ತು ಅಸಲಿ ಸರದ ಬದಲು ನಕಲಿ ಸರ ಹಾಕಿ ನಾಪತ್ತೆಯಾಗಿದ್ದಾಳೆ.

ರಮೇಶ್ ರವರ ತಾಯಿಯ ಚಿನ್ನಾಭರಣ ಅಷ್ಟೇ ಅಲ್ಲದೇ ಬೇರೆ ಬೇರೆ ಪೇಶೆಂಟ್​ಗಳ ಚಿನ್ನಾಭರಣ ಸಹ ಈ ಕಳ್ಳಿ ಕದ್ದಿದ್ದಾಳೆ. ಅದೇ ಆಸ್ಪತ್ರೆಯಲ್ಲಿ ಇದೇ ರೀತಿಯಾಗಿ ಕೋಮಲಾ ಎಂಬಾ‌ ಪೇಶೆಂಟ್ ಗು ಸಹ‌ ಇದೇ ರೀತಿಯಾಗಿ ವಂಚನೆ ಆಗಿದೆ. ಸದ್ಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Related news

error: Content is protected !!