Friday, April 19, 2024
spot_imgspot_img
spot_imgspot_img

ವಿಟ್ಲ: ಕಬಕ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ರಥಕ್ಕೆ ತಡೆ!

- Advertisement -G L Acharya panikkar
- Advertisement -
driving

ವಿಟ್ಲ: ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಲಿರುವ ಸ್ವಾತಂತ್ರ್ಯ ರಥಕ್ಕೆ ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ಎಸ್ ಡಿ.ಪಿ.ಐ ಕಾರ್ಯರ್ತರು ತಡೆ ಒಡ್ಡಿದ ಘಟನೆ ಇಂದು ಸಂಭವಿಸಿದೆ.

ಗ್ರಾಮ ಪಂಚಾಯತ್ ರಥಕ್ಕೆ ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ಗ್ರಾ.ಪಂ. ಅಧ್ಯಕ್ಷರು ಚಾಲನೆ ನೀಡಿದರು. ಈ ವೇಳೆ ಜೈಕಾರ ಹಾಕುತ್ತಿದ್ದಂತೆ ಎಸ್.ಡಿ.ಪಿ.ಐ. ಕಾರ್ಯಕರ್ತರು ದಿಕ್ಕಾರ ಕೂಗಿ ಸ್ವಾತಂತ್ರ್ಯ ರಥಕ್ಕೆ ತಡೆ ಒಡ್ಡಿದ್ದಾರೆ.

ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದಿದ್ದು, ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒ ರವರು ಸಮಾದಾನ ಮಾಡಿದರು ಕೇಳಿಸಿಕೊಳ್ಳದ ತಂಡ ವೀರ ಸಾವರ್ಕರ್ ಫೋಟೊ ತೆಗೆದು ಟಿಪ್ಪು ಸುಲ್ತಾನ್ ಫೋಟೊ ಅಳವಡಿಸುವಂತೆ ಪಟ್ಟು ಹಿಡಿಯಿತು.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ನಗರ ಠಾಣಾ ಇನ್ಸ್ ಪೆಕ್ಟರ್ ಗೋಪಾಲ ನಾಯ್ಕ್ ರವರ ನೇತೃತ್ವದ ಪೊಲೀಸರ ತಂಡ ಪ್ರತಿಭಟನಾಕಾರರನ್ನು ಚದುರಿಸಿದರು.

- Advertisement -

Related news

error: Content is protected !!