Sunday, April 28, 2024
spot_imgspot_img
spot_imgspot_img

ನಲಪಾಡ್‌ ಅಕಾಡೆಮಿಯ ತೆರವು ಕಾರ್ಯ ಸ್ಥಗಿತ; ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಕೈ ನಾಯಕ

- Advertisement -G L Acharya panikkar
- Advertisement -

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಎರಡನೇ ದಿನವೂ ಬೃಹತ್‌ ಕಟ್ಟಡಗಳನ್ನು ತೆರವು ಕಾರ್ಯ ನಡೆಸಲಾಗುತ್ತಿದೆ. ಈ ಬೆನ್ನಲ್ಲೇ ಇದೀಗ ನಲಪಾಡ್‌ ಅಕಾಡೆಮಿಯ ತೆರವು ಕಾರ್ಯಕ್ಕಾಗಿ ಜೆಸಿಬಿ ಗೇಟ್‌ ಟಚ್‌ ಮಾಡುತ್ತಿದ್ದಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಭಾರೀ ಹೈಡ್ರಾಮಕ್ಕೆ ಕಾರಣವಾಗಿದೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ಗುರುತಿಸಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಬೆನ್ನಲ್ಲೇ ಇದೀಗ ನಲಪಾಡ್‌ ಅಕಾಡೆಮಿಯ ತೆರವು ಕಾರ್ಯ ಸ್ಥಗಿತ ಮಾಡಲಾಗಿದೆ. ಒತ್ತುವರಿ ತೆರವು ಮಾಡಿಸುತ್ತಿರೋ ಅಧಿಕಾರಿಗಳ ಮೇಲೆ ಬೆದರಿಕೆ ಹಾಕಲಾಗುತ್ತಿದೆ

ರಾಜಕಾಲುವೆ ತೆರವು ಕಾರ್ಯಾಚರಣೆ ದೊಡ್ಡ ಹೈಡ್ರಾಮಾ ಸೃಷ್ಟಿಯಾಗಿದೆ. ಸ್ಥಳದಲ್ಲೇ ಇರುವ ಹ್ಯಾರಿಸ್‌ ಆಪ್ತ ಸಹಾಯಕ ಇದ್ದು ಕೆಲಸ ಸ್ಥಗಿತ ಮಾಡಲು ಒತ್ತಾಯ ಮಾಡುತ್ತಿದ್ದಾರೆ.

ಬಿಬಿಎಂಪಿ ಅಧಿಕಾರಿಗಳಿಗೆ ನಲಪಾಡ್‌ ಅಕಾಡೆಮಿಯ ಗೇಟ್‌ ತೆಗೆಯಲು ಅವಕಾಶ ಕೊಡಲಿಲ್ಲ. ನಿನ್ನೆ ಮನೆ ಮಾಲೀಕರ ಕತ್ತಿನ ಪಟ್ಟಿ ಹಿಡಿದು ಪೊಲೀಸರು ಹೊರ ದಬ್ಬಿ ತೆರವು ಕಾರ್ಯ ನಡೆಸಿದ್ದಾರೆ. ಆದರೇ ಇಂದು ನಲಪಾಡ್‌ ಅಕಾಡೆಮಿಯ ತೆರವು ಕಾರ್ಯಕ್ಕೆ ಜೆಸಿಬಿ ಆಗಮಿಸುತ್ತಿದ್ದಂತೆ ಕೆಲವು ಕಾಲ ಕೆಲಸವನ್ನೇ ಸ್ಥಗಿತಗೊಳಿಸಿರುವುದು ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ.

astr
- Advertisement -

Related news

error: Content is protected !!