Saturday, May 4, 2024
spot_imgspot_img
spot_imgspot_img

ನವಮಂಗಳೂರು ಬಂದರಿಗೆ ಆಗಮಿಸಿದ ಬೃಹತ್ ಹಡಗು ‘ಎಂಎಸ್ ನಾಟಿಕಾ’

- Advertisement -G L Acharya panikkar
- Advertisement -

ಮಂಗಳೂರು : ಪ್ರಸಕ್ತ ಋತುವಿನ 5ನೇ ಪ್ರಯಾಣಿಕರ ಹಡಗು ‘ಎಂಎಸ್ ನಾಟಿಕಾ’ ನವ ಮಂಗಳೂರು ಬಂದರಿಗೆ ಆಗಮಿಸಿದೆ. 550 ಪ್ರಯಾಣಿಕರು ಹಾಗೂ 400 ಸಿಬ್ಬಂದಿಯನ್ನು ಒಳಗೊಂಡ ಹಡಗು ಬರ್ತ್ ಸಂಖ್ಯೆ 4ರಲ್ಲಿ ಬಂದು ನಿಂತಿದೆ.

ಹಡಗಿನ ಒಟ್ಟು ಉದ್ದ 180.5 ಮೀಟರ್. ಇದು 30,277 ಟನ್ ಭಾರವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಈ ಹಡಗು ಮಸ್ಕತ್‌ನಿಂದ ಮಾಲ್ಡಿವ್ಸ್‌ ಮೂಲಕ ಭಾರತಕ್ಕೆ ಆಗಮಿಸಿದೆ. ಈ ಹಡಗು ಹಿಂದೆ ಮುಂಬೈ ಹಾಗೂ ಮುರ್ಮುಗೋವಾ ಬಂದರಿನಲ್ಲಿ ನಿಂತಿತ್ತು. ಈ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ಯಕ್ಷಗಾನ ಹಾಗೂ ಚೆಂಡೆಯ೦ತಹ ಸಾಂಪ್ರದಾಯಿಕ ಕಲೆಗಳ ಮೂಲಕ ಸ್ವಾಗತಿಸಲಾಯಿತು.

ಬಳಿಕ ಪ್ರಯಾಣಿಕರು 2 ಸೆಟಲ್ ಬಸ್‌ಗಳು ಸೇರಿದಂತೆ 15 ಬಸ್‌ಗಳಲ್ಲಿ ಮಂಗಳೂರಿನ ವಿವಿಧ ಪ್ರವಾಸಿ ಸ್ಥಳ, ದೇವಾಲಯ, ಚರ್ಚ್, ಸ್ಥಳೀಯ ಮಾರುಕಟ್ಟೆ ಹಾಗೂ ಇತರ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!