- Advertisement -
- Advertisement -
ಉಳ್ಳಾಲ: ಹೆದ್ದಾರಿ ದಾಟುತ್ತಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನಪ್ಪಿದ ಘಟನೆ ಘಟನೆ ರಾ.ಹೆ.66 ರ ಕೋಟೆಕಾರು ಬಳಿಯ ಅಡ್ಕ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ
ಮೃತರನ್ನು ಕೋಟೆಕಾರು ನೆಲ್ಲಿಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನಿವಾಸಿ ಶ್ರೀಕಾಂತ್ (46) ಎಂದು ಗುರುತಿಸಲಾಗಿದೆ.
ಇಂದು ಮಧ್ಯಾಹ್ನ ಅಡ್ಕದಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಕೇರಳದಿಂದ ಧಾವಿಸುತ್ತಿದ್ದ ಕಾರು ಶ್ರೀಕಾಂತ್ ಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಶ್ರೀಕಾಂತ್ ರನ್ನು ಅಪಘಾತ ನಡೆಸಿದ ಕಾರು ಚಾಲಕನೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕೊಡದೆ ಮೃತಪಟ್ಟಿದ್ದಾರೆ.
ಮೃತ ಶ್ರೀಕಾಂತ್ ತುಳುನಾಡು ಫ್ರೆಂಡ್ಸ್ ಕೋಟೆಕಾರುವಿನ ಸಕ್ರಿಯ ಸದಸ್ಯರಾಗಿದ್ದು, ಬಿಜೆಪಿ ಕಾರ್ಯಕರ್ತರಾಗಿದ್ದರು.
- Advertisement -