Wednesday, May 15, 2024
spot_imgspot_img
spot_imgspot_img

ನವ ಭಾರತಕ್ಕೆ ಪೂರ್ವಾಂಚಲ ಎಕ್ಸ್​ಪ್ರೆಸ್​​ವೇ ಮೆರೆಗು; ಅದ್ಭುತ ಏರ್​ಶೋ ಕಣ್ತುಂಬಿಕೊಂಡ ಮೋದಿ

- Advertisement -G L Acharya panikkar
- Advertisement -

ನವ ಭಾರತಕ್ಕೆ ಮೆರುಗು ನೀಡುವಂತೆ ನಿರ್ಮಾಣವಾಗಿರುವ ಪೂರ್ವಾಂಚಲ ಎಕ್ಸ್​ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಿದರು. ತುರ್ತು ಸಂದರ್ಭದಲ್ಲಿ ಯುದ್ಧ ವಿಮಾನಗಳು ಲ್ಯಾಂಡ್​ ಆಗಲು ಅನುಕೂಲವಾಗುವಂತೆ ಎಕ್​​​ಪ್ರೆಸ್​ವೇ ನಿರ್ಮಾಣ ಮಾಡಲಾಗಿದ್ದು, ಈ ಹೆದ್ದಾರಿ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳ ಅಭಿವೃದ್ಧಿಗೆ ಪೂರಕವಾಗಲಿದೆ.

ಭಾರತ ವಾಯು ಸೇನೆಗೆ ಸೇರಿದ ಸಿ-130ಜೆ ಸೂಪರ್​ ಹರ್ಕುಲಸ್ ವಿಮಾನದಲ್ಲಿ ಬಂದು ಹೆದ್ದಾರಿ ಮೇಲೆ ಪ್ರಧಾನಿ ಮೋದಿ ಲ್ಯಾಂಡ್​ ಆಗಿದರು. ಆ ಬಳಿಕ ಹೆದ್ದಾರಿಯನ್ನು ಉದ್ಘಾಟನೆ ಮಾಡಿ ಈ ಹಿಂದಿನ ಯುಪಿಎ ಸರ್ಕಾರ ಮತ್ತು ಯುಪಿಯಲ್ಲಿ ಆಡಳಿತ ನಡೆಸಿದ್ದ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಆ ಬಳಿಕ ಆರಂಭವಾದ ಇಂಡಿಯನ್​​ ಏರ್​​ಫೋರ್ಸ್​​ ಏರ್​​ ಶೋ ವೀಕ್ಷಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಾಥ್​ ನೀಡಿದ್ದರು. ಏರ್​ ಇಂಡಿಯಾದ ಸುಖೋಯ್‌, ಮಿರಾಜ್ ಏರ್​​ಕಾರ್ಫ್ಟ್​, ಮಿರಾಜ್​ 2000, ಜಾಗ್ವಾರ್ ವಿಮಾನ, ಮಿಡಿಯಂ ಟ್ರಾನ್ಸ್​​ಪೋರ್ಟ್​​​ ಏರ್​​ಕಾರ್ಫ್ಟ್​​​ ಎಎನ್​-32 ಸೇರಿದಂತೆ ವಿವಿಧ ಯುದ್ಧ ವಿಮಾನಗಳು ಪ್ರದರ್ಶನ ನೀಡಿದವು. ಹೈವೇ ಮೇಲೆ ನಡೆದ ಯುದ್ಧ ವಿಮಾನಗಳ ಕಸರತ್ತನ್ನು ಮೋದಿ ಕಣ್ತುಂಬಿಕೊಂಡರು. ಅಂದಹಾಗೇ 340 ಕಿಮೀ ಉದ್ಧ ಇರೋ ಪೂರ್ವಾಂಚಲ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ 18 ಫ್ಲೇ ಓವರ್​​​, 7 ರೈಲ್ವೆ ಬ್ರಿಡ್ಜ್​​​, ಉದ್ದವಾದ 7 ಫ್ಲೇ ಓವರ್​, 104 ಸಣ್ಣ ಬ್ರಿಡ್ಜ್​​​ಗಳು, 13 ಸ್ಥಳಗಳಲ್ಲಿ ಇಂಟರ್​ ಚೇಂಜ್​​​ ಮಾರ್ಗಗಳು, 217 ಅಂಡರ್​ ಪಾಸ್​ಗಳನ್ನು ನಿರ್ಮಾಣ ಮಾಡಲಾಗಿದೆ.

- Advertisement -

Related news

error: Content is protected !!