Saturday, April 27, 2024
spot_imgspot_img
spot_imgspot_img

ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೂಟ್​ಕೇಸ್​ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ

- Advertisement -G L Acharya panikkar
- Advertisement -

ನವದೆಹಲಿ: 2 ದಿನಗಳ ಹಿಂದೆ ನಾಪತ್ತೆಯಾಗಿದ್ದ 17 ವರ್ಷದ ಯುವಕನ ಶವ ಸೂಟ್​ಕೇಸ್​ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಾಯುವ್ಯ ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ಇಂದು ಬೆಳಗ್ಗೆ 17 ವರ್ಷದ ಯುವಕನ ಮೃತದೇಹವನ್ನು ಸೂಟ್​ಕೇಸ್​ನಲ್ಲಿ ತುಂಬಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 2 ದಿನಗಳ ಹಿಂದೆ ರೋಹಿಣಿ ಪ್ರದೇಶದಿಂದ ಈ ಯುವಕ ನಾಪತ್ತೆಯಾಗಿದ್ದ. ಈ ಕುರಿತು ಆತನ ಪೋಷಕರು ದೂರು ನೀಡಿದ್ದರು. ಇಂದು ಬೆಳಗ್ಗೆ 7 ಗಂಟೆಗೆ ಆ ಯುವಕನ ಮೃತದೇಹದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ.

vtv vitla
vtv vitla

ವೈ-ಬ್ಲಾಕ್ ಮಂಗೋಲ್‌ಪುರಿ ಎದುರಿನ ಮುಖ್ಯ ರಸ್ತೆಯ ಪೀರ್ ಬಾಬಾ ಮಜಾರ್ ಬಳಿಯಲ್ಲಿ ಆ ಯುವಕನ ಶವ ಪತ್ತೆಯಾಗಿದೆ. ಆ ಯುವಕನ ಗಂಟಲು ಸೀಳಿದ ಗಾಯಗಳು ಕಂಡುಬಂದಿದೆ. ನೇರಳೆ ಬಣ್ಣದ ಟ್ರಾವೆಲ್ ಬ್ಯಾಗ್‌ನಲ್ಲಿ ಈ ಶವವನ್ನು ತುಂಬಿ ಬಿಸಾಡಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾಣೆಯಾದ ವ್ಯಕ್ತಿಯ ದಾಖಲೆಗಳನ್ನು ಪರಿಶೀಲಿಸಲು ಎಲ್ಲಾ ನೆರೆಯ ಪೊಲೀಸ್ ಠಾಣೆಗಳು ಮತ್ತು ಜಿಲ್ಲೆಗಳಿಗೆ ತಿಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಆ ಮೃತದೇಹವು ರೋಹಿಣಿ ಸೆಕ್ಟರ್ -1ರ ನಿವಾಸಿ 17 ವರ್ಷದ ಯುವಕನದ್ದಾಗಿದೆ ಎಂದು ಪತ್ತೆಯಾಗಿತ್ತು. ಆ ಯುವಕ ಕಾಣೆಯಾದ ವರದಿಯನ್ನು ಆಧರಿಸಿ, ಶುಕ್ರವಾರ ದಕ್ಷಿಣ ರೋಹಿಣಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!