Tuesday, May 21, 2024
spot_imgspot_img
spot_imgspot_img

ನಾಪತ್ತೆಯಾದ ನಿಮ್ಮ ದೇಶದ ಹುಡುಗ ಇನ್ನೊಂದು ವಾರದಲ್ಲಿ ಮರಳಿ ಬರುತ್ತಾನೆ ಎಂದ ಚೀನಾ ಸೇನೆ

- Advertisement -G L Acharya panikkar
- Advertisement -
vtv vitla
vtv vitla
suvarna gold

ಹೊಸದಿಲ್ಲಿ: ಕಳೆದ ಮೂರು ದಿನಗಳ ಹಿಂದೆ ಅರುಣಾಚಲ ಪ್ರದೇಶದಿಂದ ನಾಪತ್ತೆಯಾದ ಹುಡುಗ ಇಲ್ಲೇ ಇದ್ದಾನೆ. ಅವನನ್ನು ಬಿಡುಗಡೆ ಮಾಡುವ ಮತ್ತು ಹಿಂದಿರುಗಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಭಾನುವಾರ ಭಾರತೀಯ ಸೇನೆಗೆ ತಿಳಿಸಿದೆ. ಕಾಣೆಯಾದ 17 ವರ್ಷದ ಬಾಲಕ ಮಿರಾಮ್ ಟ್ಯಾರನ್ ಎನ್ನಲಾಗಿದೆ.

vtv vitla

ಈತ ಕಳೆದ ಮೂರು ದಿನಗಳ ಹಿಂದೆ ಟ್ಯಾರನ್​ ಮತ್ತು ಇನ್ನೂ ಕೆಲವರು ಭಾರತ-ಚೀನಾ ಗಡಿ ಭಾಗದ ಪ್ರದೇಶಗಳಲ್ಲಿ ಬೇಟೆಯಾಡುತ್ತಿದ್ದಾಗ ಟ್ಯಾರನ್​ ನಾಪತ್ತೆಯಾಗಿದ್ದ. ಅವನ ಜತೆಗಿದ್ದವರೆಲ್ಲ ವಾಪಸ್​ ಬಂದಿದ್ದರೂ ಟ್ಯಾರನ್ ಬಂದಿರಲಿಲ್ಲ. ಹೀಗಾಗಿ ಆತನನ್ನು ಚೀನಾ ಸೇನೆಯೇ ಅಪಹರಣ ಮಾಡಿದೆ ಎಂದು ಹೇಳಲಾಗಿತ್ತು. ಬಾಲಕ ನಾಪತ್ತೆಯಾದ ವಿಷಯ ಭಾರತೀಯ ಸೇನೆಗೆ ತಿಳಿಯುತ್ತಿದ್ದಂತೆ ಅದು ಚೀನಿ ಸೇನೆಯನ್ನು ಸಂಪರ್ಕಿಸಿ, ಈತನ ಬಗ್ಗೆ ವಿಚಾರಿಸಿತ್ತು.

ಹೀಗಾಗಿ “ಅರುಣಾಚಲ ಪ್ರದೇಶದಿಂದ ಕಾಣೆಯಾಗಿರುವ ಬಾಲಕನನ್ನು ಪತ್ತೆಹಚ್ಚಲಾಗಿದೆ ಎಂದು ಚೀನಾದ ಸೇನೆಯು ನಮಗೆ ತಿಳಿಸಿದ್ದು, ಬಾಲಕನನ್ನು ಕರೆತರಲು ಸೂಕ್ತ ಕಾರ್ಯವಿಧಾನವನ್ನು ಅನುಸರಿಸಲಾಗುತ್ತಿದೆ” ಎಂದು ತೇಜ್ಪುರ್ ಪಿಆರ್ ಒ ಡಿಫೆನ್ಸ್ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ ಹೇಳಿದ್ದಾರೆ.

vtv vitla
vtv vitla
- Advertisement -

Related news

error: Content is protected !!