Saturday, May 18, 2024
spot_imgspot_img
spot_imgspot_img

ನಾಲ್ವರು ಆಟೋ ಚಾಲಕರಿಂದ ಗ್ಯಾಂಗ್‌ರೇಪ್‌..! ಮೂವರ ಬಂಧನ

- Advertisement -G L Acharya panikkar
- Advertisement -

ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ನಡೆದಿದೆ. ಮೀರ್‌ಪೇಟ್‌ನಲ್ಲಿ ಮಹಿಳೆಯೋರ್ವಳ ಮೇಲೆ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 35 ವರ್ಷದ ನಗರ ನಿವಾಸಿ ಮಹಿಳೆಯೊಬ್ಬಳು ಗುರುವಾರ ಸಂಜೆ ಯಾವುದೋ ಕೆಲಸದ ನಿಮಿತ್ತ ಕೋಠಿ ನಗರಕ್ಕೆ ತೆರಳಿದ್ದರು. ಅಲ್ಲಿ ಆಕೆ ಮೇಲೆ ಈ ಕಾಮುಕರು ದುಷ್ಕೃತ್ಯವೆಸಗಿದ್ದಾರೆ.

ಡ್ರೈವರ್ ಅಖಿಲ್ ಆಟೋವನ್ನು ಗಾಯತ್ರಿನಗರ ಬಳಿಯ ಬಾರ್‌ನ ಹಿಂಭಾಗದಲ್ಲಿ ನಿಲ್ಲಿಸಿದ್ದಾನೆ. ಬಳಿಕ ತನ್ನ ಸ್ನೇಹಿತರಾದ ನಿತಿನ್ (19), ಪ್ರಶಾಂತ್ (21) ಮತ್ತು ಶ್ರೀನುಗೆ ಎಂಬುವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದಾನೆ. ಈ ಮೂವರೂ ಸಹ ಆಟೋ ಚಾಲಕರಾಗಿದ್ದಾರೆ. ಬಳಿಕ ನಾಲ್ವರು ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಘಟನೆ ಬಗ್ಗೆ ಮಾಹಿತಿ ನೀಡಿದ ಮೀರಪೇಟ್ ಇನ್ಸ್​ಪೆಕ್ಟರ್ ಮಹೇಂದರ್ ರೆಡ್ಡಿ, ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದೇವೆ. ಆರೋಪಿ ಶ್ರೀನು ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!