Tuesday, June 23, 2026
spot_imgspot_img
spot_imgspot_img

ನಾಳೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಆಶ್ರಯದಲ್ಲಿ 7 ವರ್ಷದ ಗೋಪೂಜೆ ಹಾಗೂ ಶ್ರೀ ಗೋಪಾಲಕೃಷ್ಣ ದೇವರಿಗೆ ಕಾರ್ತಿಕ ಪೂಜೆ ಕಾರ್ಯಕ್ರಮ

- Advertisement -
- Advertisement -

ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಆಶ್ರಯದಲ್ಲಿ 7 ವರ್ಷದ ಗೋಪೂಜೆ ಹಾಗೂ ಶ್ರೀ ಗೋಪಾಲಕೃಷ್ಣ ದೇವರಿಗೆ ಕಾರ್ತಿಕ ಪೂಜೆ ಕಾರ್ಯಕ್ರಮ 30-10-2022 ನೇ ಆದಿತ್ಯವಾರ ಸಂಜೆ 4.30 ಗಂಟೆಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಪೆರುವಾಯಿಯಲ್ಲಿ ನಡೆಯಲಿದೆ.

ಸಂಜೆ 4.30 ರಿಂದ ಭಜನೆ ಪ್ರಾರಂಭಗೊಂಡು ಬಳಿಕ 6.30 ಕ್ಕೆ ಕಾರ್ತಿಕ ಪೂಜೆ, ಗೋ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಭಾ ಕಾರ್ಯಕ್ರಮದಲ್ಲಿ ಮುರಳೀಕೃಷ್ಣ ಹಸಂತಡ್ಕ, ಪ್ರಾಂತ ಸಹ ಸಂಯೋಜಕರು ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯರು ಪ್ರಮುಖ ಭಾಷಣಗಾರರಾಗಿ ಭಾಗವಹಿಸಲಿದ್ದಾರೆ.

ಭರತ್ ಕುಮ್ಡೆಲ್ ಸಂಚಾಲಕರು, ಭಜರಂಗದಳ ಪುತ್ತೂರು ಜಿಲ್ಲೆ, ಮಹೇಶ್ ಬಜತ್ತುರು ಗೋರಕ್ಷಾ ಪ್ರಮುಖ್ ಭಜರಂಗದಳ ಪುತ್ತೂರು ಜಿಲ್ಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ರಾಧಕೃಷ್ಣ ಮಣಿಯಾಣಿ ತಚ್ಚಮೆ, ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಕೆಯ್ಯುರೂ ಬೆಳ್ತಂಗಡಿ ಇವರನ್ನು ಸನ್ಮಾನಿಸಲಾಗುವುದು. ಹಾಗೂ ಎಸ್ ಎಸ್ ಎಲ್ ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪೆರುವಾಯಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಗೌರವಿಸಲಾಗುವುದು.

ಈ ಎಲ್ಲಾ ಕಾರ್ಯಕ್ರಮದಲ್ಲಿ ಎಲ್ಲಾ ಹಿಂದೂ ಬಾಂಧವರು ಭಾಗವಹಿಸಬೇಕಾಗಿ ವಿನಂತಿಸುವ ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ.

- Advertisement -

Related news

error: Content is protected !!