


ವಿಟ್ಲ: ಹಿಂದೂ ಜಾಗರಣ ವೇದಿಕೆ, ವಿಟ್ಲ ತಾಲೂಕು ಮತ್ತು ಮಂಗಳೂರು ಗ್ರಾಮಾಂತರ ಜಿಲ್ಲೆ ಆಶ್ರಯದಲ್ಲಿ 79ನೇ ಭಾರತ ಸ್ವಾತಂತ್ರ್ಯೋತ್ಸವದ ಅಂಗವಾಗಿ “ಅಖಂಡ ಭಾರತ ಸಂಕಲ್ಪ ದಿನ” ಜು.09ರಂದು ನಡೆಯಿತು.
ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ, ಮೆಲ್ಕಾರು ರಾಮದೇವ ಸಭಾಭವನ, ವೀರಕಂಭ ಶಾರದಾ ಭಜನಾ ಮಂದಿರದ ಬಳಿಯಿಂದ ಏಕಾಲಕ್ಕೆ ವಾಹನ ಜಾಥಾ ಆರಂಭವಾಗಿ ಬಳಿಕ ಕಲ್ಲಡ್ಕಕ್ಕೆ ತಲುಪಿ ಗೇರುಕಟ್ಟೆಯ ಉಮಾಶಿವ ದೇವಸ್ಥಾನದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ವಹಿಸಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿಭಾಗ ಪ್ರಮುಖರಾದ ಕೇಶವ ಬಂಗೇರ ದಿಕ್ಸೂಚಿ ಭಾಷಣ ಮಾಡಿದರು.

ಭಾರತೀಯ ವಾಯುಸೇನೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಮಾಜಿ ಯೋಧ ಶಿವರಾಮ ಭಟ್ ಕೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಸಂಯೋಜಕರಾದ ನರಸಿಂಹ ಮಾಣಿ, ಹಿಂದೂ ಜಾಗರಣ ವೇದಿಕೆ ಮುಖಂಡರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಸಂಯೋಜಕರಾದ ನವೀನ್ ಕೋಲ್ಪೆ, ತಾಲೂಕು ಜಿಲ್ಲಾ ಸಹ ಸಂಯೋಜಕರಾದ ಪುಷ್ಪರಾಜ್ ಕಮ್ಮಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕರಾದ ರುಕ್ಮಯ್ಯ ಪೂಜಾರಿ ಕಲ್ಲಡ್ಕ, ಕ್ಷೇತ್ರ ಮಂಡಲ ಅಧ್ಯಕ್ಷರಾಗಿರುವ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಜಿಲ್ಲಾ ಪ್ರಮುಖರಾದ ದಿನೇಶ್ ಅಮ್ಟೂರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಕಾರ್ಯವಾಹರಾದ ಚೇತನ್ ಕಡೇಶಿವಾಲಯ, ಹಿಂದೂ ಮುಖಂಡ ಮಿಥುನ್ ಪೂಜಾರಿ ಕಲ್ಲಡ್ಕ ಸಹಿತ ಹಿರಿಯರಾದ ನಾಗೇಶ್ ಕಲ್ಲಡ್ಕ ( ಆಕೃತಿ) ಬರಿಮಾರು ಶ್ರೀ ಮಹಾಮಾಯಿ ದೇವಸ್ಥಾನದ ಆಡಳಿತ ಮುಕ್ತೇಶ್ವರರು ರಾಕೇಶ್ ಪ್ರಭು ಬಿಜೆಪಿಯ ಪ್ರಮುಖರಾದ ಸಂದೇಶ್ ಶೆಟ್ಟಿ ಅರೆಬೆಟ್ಟು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಕಾರಿ ಸದಸ್ಯರಾದ ಹರ್ಷ ವಿಟ್ಲ. ಸಂತೋಷ್ ಕುರಿಹಾಳ. ರಾಜೇಶ್ ಕರೋಪಾಡಿ ಬಜರಂಗದಳದ ಕಲ್ಲಡ್ಕ ಪ್ರಖಂಡದ ಅಧ್ಯಕ್ಷರಾದ ಅಮಿತ್ ಕಲ್ಲಡ್ಕ ಹಲವು ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.








