Thursday, April 25, 2024
spot_imgspot_img
spot_imgspot_img

ನೀಲಿ ಚಿತ್ರ ತಾರೆ ಕೇಸ್‌ನಲ್ಲಿ ಸಿಲುಕಿಕೊಂಡ ಟ್ರಂಪ್‌..! ಅಮೆರಿಕಾದ ಮಾಜಿ ಅಧ್ಯಕ್ಷನಿಗೆ ಮತ್ತೆ ಬಂಧನದ ಭೀತಿ

- Advertisement -G L Acharya panikkar
- Advertisement -

ನೀಲಿ ಚಿತ್ರ ತಾರೆಗೆ ಹಣ ಪಾವತಿಸಿದ ಆರೋಪದ ಹಿನ್ನಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಬಂಧನ ಭೀತಿ ಎದುರಾಗಿದೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ ಡೊನಾಲ್ಡ್‌ ಟ್ರಂಪ್‌ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌ಗೆ (Stormy Daniels) ಹಣ ಪಾವತಿಸಿದ ಆರೋಪದ ಹಿನ್ನೆಲೆ ಮ್ಯಾನ್‌ಹಾಟನ್‌ನ ಗ್ರ್ಯಾಂಡ್‌ ಜ್ಯೂರಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು ಈಗ ಟ್ರಂಪ್‌ಗೆ ಬಂಧನದ ಭೀತಿ ಎದುರಿಸುತ್ತಿದ್ದು, ನ್ಯಾಯಾಲಯಕ್ಕೆ ಶರಣಾಗುವ ಸಾಧ್ಯತೆ ಇದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ತಿಳಿಸಿದೆ.

ಕ್ರಿಮಿನಲ್‌ ಆರೋಪಗಳನ್ನು ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿ ಕೂಡ ಡೊನಾಲ್ಡ್‌ ಟ್ರಂಪ್‌ ಮೇಲೆ ಬಂದಿದೆ. ಇದರಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.

ಆದರೆ, ನಾನು ಯಾವುದೇ ತಪ್ಪು ಮಾಡಿಲ್ಲ, ನಿರಪರಾಧಿ ಎಂದಿರುವ ಟ್ರಂಪ್‌, ಈ ದೋಷಾರೋಪಣೆಯನ್ನು ರಾಜಕೀಯ ಕಿರುಕುಳ ಮತ್ತು ಚುನಾವಣಾ ಹಸ್ತಕ್ಷೇಪ ಎಂದು ಕಿಡಿಕಾರಿದ್ದಾರೆ. ಅದಲ್ಲದೇ, ಸರ್ಕಾರದ ಈ ತೀರ್ಮಾನವು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರನ್ನು ಭಾರೀ ಬೆಲೆ ತೆರುವಂತೆ ಮಾಡಲಿದೆ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣದ ತನಿಖೆಯ ನೇತೃತ್ವವನ್ನು ಡೆಮಾಕ್ರೆಟಿಕ್‌ ಮ್ಯಾನಹ್ಯಾಟನ್‌ ಜಿಲ್ಲಾ ಅಟಾರ್ನಿ ಅಲ್ವಿನ್‌ ಬ್ರಾಗ್‌ ವಹಿಸಿದ್ದಾರೆ.

- Advertisement -

Related news

error: Content is protected !!