Tuesday, June 23, 2026
spot_imgspot_img
spot_imgspot_img

ನೆಚ್ಚಿನ ನಟನ ಸಿನಿಮಾ ಚೆನ್ನಾಗಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಅಭಿಮಾನಿ

- Advertisement -
- Advertisement -

ಹೈದರಾಬಾದ್: ಮಾರ್ಚ್ 11 ರಂದು ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ಚಿತ್ರ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಯಾಗಿದ್ದು, ಈ ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆಗಳನ್ನು ಬಂದಾಗ ಪ್ರಭಾಸ್ ಅವರ ರವಿತೇಜ ಎಂಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ತಿಲಕ್ ನಗರದಲ್ಲಿ ನಡೆದಿದೆ.

ರಾಧೆ ಶ್ಯಾಮ್ ನೆಗೆಟಿವ್ ವಿಮರ್ಶೆಗಳನ್ನು ಪಡೆದಾಗ ರವಿ ಅಸಮಾಧಾನಗೊಂಡಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಭಾಸ್ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ತಿಳಿದು ಬಂದಿದೆ.

ರಾಧೆ ಶ್ಯಾಮ್ ಸಿನಿಮಾ ರವಿತೇಜ ಅವರ ನಿರೀಕ್ಷೆಗೆ ತಕ್ಕಂತೆ ಮೂಡಿಬರಲಿಲ್ಲ ಎಂಬ ಭಾವನೆಯಿಂದ ಸಾಯುತ್ತೇನೆ ಎಂದು ತಾಯಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಈ ಸಂಬಂಧ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಇದೀಗ ತನಿಖೆ ನಡೆಸುತ್ತಿದ್ದಾರೆ.

ಇನ್ನು ರಾಧಾ ಕೃಷ್ಣ ಕುಮಾರ್ ಅವರ ನಿರ್ದೇಶನದ, ರಾಧೆ ಶ್ಯಾಮ್ ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿತ್ತು ಮತ್ತು ಚಿತ್ರವು ಅಂತಿಮವಾಗಿ ಮಾರ್ಚ್ 11 ರಂದು ಭಾರಿ ನಿರೀಕ್ಷೆಗಳ ನಡುವೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

- Advertisement -

Related news

error: Content is protected !!