Thursday, May 2, 2024
spot_imgspot_img
spot_imgspot_img

ನೆಟ್​ಫ್ಲಿಕ್ಸ್ ಸಿರೀಸ್ ನಲ್ಲಿ ಕಡಲನಗರಿಯ ಕಮಿಷನರ್; ಡಿಟೆಕ್ಟಿವ್ ಪಾತ್ರದಲ್ಲಿ ಶಶಿಕುಮಾರ್!

- Advertisement -G L Acharya panikkar
- Advertisement -
driving

ಡಾಕ್ಯುಮೆಂಟರಿ ಹಾಗೂ ವೆಬ್​ ಸೀರೀಸ್ ಮೂಲಕ ಒಟಿಟಿ ಕ್ಷೇತ್ರದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುತ್ತಿರುವ ನೆಟ್​ಫ್ಲಿಕ್ಸ್, ಇದೀಗ ಹೊಸ ಸರಣಿಯ ಮುಖಾಂತರ ವಿಶೇಷ ಕಥಾ ವಸ್ತುವೊಂದನ್ನು ಪ್ರೇಕ್ಷಕರಿಗೆ ಕಟ್ಟಿಕೊಡಲು ತಯಾರಾಗಿದೆ.

ಬೆಂಗಳೂರಿನ ಅಪರಾಧ ಜಗತ್ತಿನ 4 ವಿಶೇಷ ಪ್ರಕರಣಗಳನ್ನು ತೆರೆಯ ಮೇಲೆ ತರಲು ನೆಟ್​ಫ್ಲಿಕ್ಸ್ ತಯಾರಾಗಿದ್ದು, ಅದರ ಬಿಡುಗಡೆಗೂ ಮುಹೂರ್ತ ನಿಗದಿ ಮಾಡಿದೆ. ವಿಶೇಷವೆಂದರೆ, ಈ ಸೀರೀಸ್ ನೈಜ ಸಾಕ್ಷ್ಯಚಿತ್ರ ಮಾದರಿಯಲ್ಲಿರಲಿದ್ದು, ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗುವ ಭಾರತದ ಮೊದಲ ನೈಜ ಘಟನೆಗಳನ್ನು ಆಧರಿಸಿದ ಕ್ರೈಮ್ ಸೀರೀಸ್ ಇದಾಗಿದೆ. ಈ ಚಿತ್ರಕ್ಕೆ ‘ಕ್ರೈಂ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್’ ಎಂದು ಹೆಸರಿಡಲಾಗಿದ್ದು, ಸೆಪ್ಟೆಂಬರ್ 22 ರಿಂದ ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ಈ ಸಾಕ್ಷ್ಯಚಿತ್ರವು ಬೆಂಗಳೂರಿನ ಪೊಲೀಸರು ಸಂಕೀರ್ಣ ಪ್ರಕರಣಗಳ ಹಿಂದೆ ಬಿದ್ದು, ಆ ಪ್ರಕರಣಗಳನ್ನು ಭೇಧಿಸುವುದನ್ನು ಎಳೆಎಳೆಯಾಗಿ ತೆರೆದಿಡುತ್ತದೆ. ಈ ಸರಣಿಯಲ್ಲಿ ನಾಲ್ಕು ಪ್ರಮುಖ ಪ್ರಕರಣಗಳನ್ನು ಪೊಲೀಸರು ತನಿಖೆ ಮಾಡುವುದನ್ನು ತೋರಿಸಲಾಗಿದೆ. ಸೀರೀಸ್​ನ ಟ್ರೈಲರ್ ಬಿಡುಗಡೆಯಾಗಿದ್ದು, ಕನ್ನಡ ಭಾಷೆಯಲ್ಲಿದೆ. ಇದು ವೀಕ್ಷಕರ ಸಂತಸಕ್ಕೆ ಕಾರಣವಾಗಿದ್ದು, ನೋಡುಗರಿಗೆ ಆಸಕ್ತಿ ಮೂಡಿಸುವಂತಿದೆ.

ಈ ಕ್ರೈಮ್ ಸ್ಟೋರಿ ಚಿತ್ರೀಕರಣ ವೇಳೆ ಈಗ ಮಂಗಳೂರು ಪೊಲೀಸ್ ಕಮಿಷನರ್ ಆಗಿರುವ ಶಶಿಕುಮಾರ್, ಬೆಂಗಳೂರು ನಗರದಲ್ಲಿ ಉತ್ತರ ವಿಭಾಗದ ಡಿಸಿಪಿ ಆಗಿದ್ದರು. ಇವರ ನೇತೃತ್ವದಲ್ಲಿಯೇ ಪ್ರತೀ ಅಪರಾಧ ಪ್ರಕರಣಗಳ ತನಿಖೆ ನಡೆಯುತ್ತಿದ್ದುದರಿಂದ ಚಿತ್ರೀಕರಣ ತಂಡವೂ ಇವರ ಜೊತೆಗೇ ಇತ್ತು. ಈ ಕ್ರೈಮ್ ಸ್ಟೋರಿಯಲ್ಲಿ ಆಗಿನ ಡಿಸಿಪಿ ಶಶಿಕುಮಾರ್ ಸೇರಿದಂತೆ ಬೆಂಗಳೂರು ನಗರದ ಬಹುತೇಕ ಅಧಿಕಾರಿಗಳು ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಈ ಸಿರೀಸ್ ನ ಡೈರೆಕ್ಟರ್ ಲಂಡನ್ ಮೂಲದ ಕ್ಲಾರಾ ಮತ್ತು ಜಾನ್ ಎನ್ನಲಾಗಿದೆ. ಬೆಂಗಳೂರಿನ ರಿಚಾ, ನವೀನ್, ತರುಣ್, ಅಮಿತ್, ಸಂದೀಪ್ ಎನ್ನುವ ಐವರ ತಂಡದ ನೇತೃತ್ವದಲ್ಲಿ ಚಿತ್ರೀ ಕರಣ ನಡೆದಿತ್ತು.

ಚಿತ್ರದ ಟ್ರೈಲರ್ (ಸೆಪ್ಟೆಂಬರ್ 14) ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತ ಮೂಲದ ಡಾಕ್ಯುಮೆಂಟರಿಗಳಿಗೆ ಒಳ್ಳೆಯ ವಿಷಯ ವಸ್ತುಗಳಿದ್ದು, ನೆಟ್​ಫ್ಲಿಕ್ಸ್​ನ ಈ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಲವರು ಹಾರೈಸಿದ್ದಾರೆ. ಕನ್ನಡಿಗರು ನೆಟ್​ಫ್ಲಿಕ್ಸ್​ನ ಈ ಸೀರೀಸ್ ತಮ್ಮದೇ ಭಾಷೆಯಲ್ಲಿ ಬರುತ್ತಿರುವುದಕ್ಕೆ ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದು, ಬೆಂಗಳೂರು ಪೊಲೀಸರ ಚಾಣಾಕ್ಷತೆಯನ್ನು ದೇಶ ನೋಡುವ ಸಮಯ ಬಂದಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಸೀರೀಸ್ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಕೆರಳಿಸಿದ್ದು, ಇದೇ ತಿಂಗಳ 22ರಂದು ಬಿಡುಗಡೆಯಾಗಲಿದೆ.

- Advertisement -

Related news

error: Content is protected !!