Saturday, May 4, 2024
spot_imgspot_img
spot_imgspot_img

ನೆರೆಮನೆಯವನೇ ಪ್ರಿಯಕರ..! ತಾಯಿಯ ಅಕ್ರಮ ಸಂಬಂಧಕ್ಕೆ ನೋ ಎಂದ ಪುತ್ರಿಯ ಬರ್ಬರ ಹತ್ಯೆ

- Advertisement -G L Acharya panikkar
- Advertisement -

10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಹತ್ಯೆಗೈದ ಘಟನೆ ನಡೆದಿದೆ. ಹತ್ಯೆಗೆ ಕಾರಣ ತಾಯಿಯ ಅನೈತಿಕ ಸಂಬಂಧವೇ ಕಾರಣವಾಗಿದೆ. ಈ ಘಟನೆ ಗದಗ ಜಿಲ್ಲೆ, ಮುಂಡರಗಿ ಪಟ್ಟಣದಲ್ಲಿ ನಡೆದಿದೆ. ತಾಯಿ ಮತ್ತು ಆಕೆಯ ಅನೈತಿಕ ಸಂಬಂಧದ ಕುರಿತು ಎಲ್ಲರಿಗೆ ಹೇಳಿಬಿಡುತ್ತಾಳೆ ಎಂಬ ಕಾರಣಕ್ಕೆ ತಾಯಿಯ ಪ್ರಿಯಕರನೇ ಉಸಿರುಗಟ್ಟಿಸಿ ಬಾಲಕಿಯನ್ನು ಕೊಲೆಗೈದಿದ್ದಾನೆ.

ನೆರೆಮನೆಯವನೊಂದಿಗೆ ತಾಯಿಗೆ ಪ್ರೇಮಾಂಕುರ..!
ಮೆಹಬೂಬ್ ಸಾಬ್ ಹಾಗೂ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಬಾಲಕಿ ತಾಯಿ ಮಧ್ಯೆ ಅನೈತಿಕ ಸಂಬಂಧ ಇತ್ತು. ಪಕ್ಕದ ಮನೆಯಲ್ಲೇ ವಾಸವಿದ್ದ ಮೆಹಬೂಬ್ ಸಾಬ್ ಶಿಕ್ಷಕಿಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಇದು ಬಾಲಕಿಯ ಗಮನಕ್ಕೂ ಸಹ ಬಂದಿತ್ತು. ಹೀಗಾಗಿ ತನ್ನ ತಾಯಿ ಬಳಿ ಇದನ್ನು ವಿರೋಧಿಸಿದ್ದಳು ಎನ್ನಲಾಗಿದೆ.

ಆಗ ಬಾಲಕಿ ತಾಯಿ, ಮೆಹಬೂಬ್ ಸಾಬ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದ್ದು, ಆದರೆ ಇದಕ್ಕೆ ತಯಾರಿರದ ಆತ ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕಿಯನ್ನೇ ಮುಗಿಸಲು ಮುಂದಾಗಿದ್ದಾನೆ. ಮಾರ್ಚ್ 6ರಂದು ಹತ್ತನೇ ತರಗತಿ ಪೂರ್ವಸಿದ್ಧತೆ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು, ಪೊಲೀಸರ ವಿಚಾರಣೆ ವೇಳೆ ಸತ್ಯ ಸಂಗತಿ ಬಹಿರಂಗವಾಗಿದೆ.

- Advertisement -

Related news

error: Content is protected !!