Sunday, June 7, 2026
spot_imgspot_img
spot_imgspot_img

ನೆಲ್ಯಾಡಿ: ಕರ್ತವ್ಯ ನಿರತ ಮೆಸ್ಕಾಂ ಅಧಿಕಾರಿ ಮೇಲೆ ಗಾ.ಪಂ ಉಪಾಧ್ಯಕ್ಷ ಹಾಗೂ ಸದಸ್ಯನಿಂದ ಹಲ್ಲೆ..!!

- Advertisement -
- Advertisement -

vtv vitla

ನೆಲ್ಯಾಡಿ : ಉಪ್ಪಿನಂಗಡಿ ಬಳಿ ವಿದ್ಯುತ್ ಸಂಪರ್ಕ ತನಿಖೆ ನಡೆಸಲು ತೆರಳಿದ ಸಂದರ್ಭದಲ್ಲಿ ಕರ್ತವ್ಯ ನಿರತ ಮೆಸ್ಕಾಂ ಜೆಇಇ ಮೇಲೆ ಗ್ರಾ.ಪಂ ಉಪಾಧ್ಯಕ್ಷ ಹಾಗೂ ಸದಸ್ಯ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೆಲ್ಯಾಡಿ ಮೆಸ್ಕಾಂ ಶಾಖಾ ಇಂಜಿನಿಯರ್ ರಮೇಶ್.ಬಿ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ. ಕಾರ್ತಿಕೇಯನ್ ಹಾಗೂ ಎಂ.ಕೆ ಪೌಲೋಸ್ ಹಲ್ಲೆ ನಡೆಸಿದವರು ಎನ್ನಲಾಗಿದೆ. ಗುಂಡ್ಯ ಎಂಬಲ್ಲಿ ವಿದ್ಯುತ್ ಸಂಪರ್ಕ ಪರಿಶೀಲನೆ ವೇಳೆ ಈ ಘಟನೆ ನಡೆದಿದೆ.

ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸಿ ಕಾರ್ತಿಕೇಯನ್ ಹಾಗೂ ಎಂ.ಕೆ ಪೌಲೋಸ್ ಇಬ್ಬರನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

vtv vitla

- Advertisement -

Related news

error: Content is protected !!