Monday, September 21, 2026
spot_imgspot_img
spot_imgspot_img

ನೆಲ್ಯಾಡಿ: ಚಲಿಸುತ್ತಿದ್ದ ಬೈಕ್ ನ ಮೇಲೆ ಉರುಳಿ ಬಿದ್ದ ಮರ; ಸವಾರನಿಗೆ ಗಾಯ

- Advertisement -
- Advertisement -
suvarna gold

ನೆಲ್ಯಾಡಿ: ಇಲ್ಲಿನ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಚಲಿಸುತ್ತಿದ್ದ ಬೈಕ್ ನ ಮೇಲೆ ಮರ ಬಿದ್ದ ಪರಿಣಾಮ ಸವಾರ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾದ ಘಟನೆ ಜ.17 ರಂದು ಬೆಳಗ್ಗೆ ಸಂಭವಿಸಿದೆ. ಗಾಯಾಳುವನ್ನು ಕಾಸರಗೋಡು ನಿವಾಸಿ ಪವನ್ (26)ಎಂದು ಗುರುತಿಸಲಾಗಿದೆ.

vtv vitla

ಹಾಸನದ ಖಾಸಗಿ ಕಂಪನಿಯೊಂದರಲ್ಲಿ ಮೆನೇಜರ್ ಆಗಿದ್ದ ಇವರು, ಇಂದು ಬೆಳಗ್ಗೆ ಕಾಸರಗೋಡಿನಿಂದ ಹಾಸನಕ್ಕೆ ತೆರಳುತ್ತಿದ್ದ ವೇಳೆ ಅಡ್ಡಹೊಳೆ ತಲುಪುತ್ತಿದ್ದಂತೆಯೇ ದೂಪದ ಮರವೊಂದು ಬೈಕಿನ ಹಿಂಬದಿಗೆ ಬಿದ್ದಿದೆ.

ಪರಿಣಾಮವಾಗಿ ಬೈಕ್ ಪಲ್ಟಿಯಾಗಿ ಸುಮಾರು ದೂರಕ್ಕೆ ಜಾರಿಗೊಂಡು ಹೋಗಿದ್ದು, ಸವಾರ ಪವಾನ್‌ರವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯರ ನೆರವಿನೊಂದಿಗೆ ಶಿರಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!