Saturday, April 20, 2024
spot_imgspot_img
spot_imgspot_img

ನೇರಳಕಟ್ಟೆ ಶಾಲೆಯಲ್ಲಿ ಮಾಣಿ ಕ್ಲಸ್ಟರ್ ವ್ಯಾಪ್ತಿಯ ವಿದ್ಯಾರ್ಥಿಗಳ ಕಲಿಕಾ ಹಬ್ಬ

- Advertisement -G L Acharya panikkar
- Advertisement -
vtv vitla

ಬಂಟ್ವಾಳ : ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಮಾಣಿ ಕ್ಲಸ್ಟರ್ ಇವುಗಳ ಸಹಯೋಗದೊಂದಿಗೆ ಎರಡು ದಿನಗಳ ಕಲಿಕಾ ಹಬ್ಬವು ನೇರಳಕಟ್ಟೆ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ನೇರಳಕಟ್ಟೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎನ್.ಕೆ.ಅಬೂಬಕ್ಕರ್ (ಅಬ್ಬು) ಅಧ್ಯಕ್ಷತೆ ವಹಿಸಿದ್ದರು.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಕೀಲಾ ಕೆ.ಪೂಜಾರಿ, ಸದಸ್ಯರಾದ ಕೆ. ಶ್ರೀಧರ ರೈ, ಲತೀಫ್ ನೇರಳಕಟ್ಟೆ, ಧನುಂಜಯ ಗೌಡ, ಸಮಿತಾ ಡಿ. ಪೂಜಾರಿ, ಪ್ರೇಮ, ಲಕ್ಷ್ಮಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷಾ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಬಾಲಕೃಷ್ಣ ಆಳ್ವ, ನೇರಳಕಟ್ಟೆ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ನಿರಂಜನ್ ರೈ, ಮಾಣಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸತೀಶ್ ರಾವ್, ಕಾರ್ಯಕ್ರಮ ನೋಡೆಲ್ ಅಧಿಕಾರಿ, ಶಂಭೂರು ಶಾಲಾ ಮುಖ್ಯ ಶಿಕ್ಷಕ ಕಮಲಾಕ್ಷ ಅತಿಥಿಗಳಾಗಿ ಭಾಗವಹಿಸಿದ್ದರು.

ಶಾಲಾಭಿವೃದ್ಧಿ ಸಮಿತಿ ಸಮಿತಿ ಉಪಾಧ್ಯಕ್ಷೆ ಭಾರತಿ, ಸದಸ್ಯರುಗಳಾದ ಸಾಹುಲ್ ಹಮೀದ್ ಪರ್ಲೋಟ್ಟು, ಅತಾವುಲ್ಲಾ ನೇರಳಕಟ್ಟೆ, ರಶೀದ್ ಪರ್ಲೋಟ್ಟು, ಮುನೀರಾ, ಸಫಿಯಾ ಹಾಗೂ ಲತಾ ಉಪಸ್ಥಿತರಿದ್ದರು.

ಎರಡು ದಿವಸ ನಡೆದ ಈ ಕಲಿಕಾ ಹಬ್ಬದಲ್ಲಿ ಮಾಣಿ ಕ್ಲಸ್ಟರ್ ವ್ಯಾಪ್ತಿಯ ನೇರಳಕಟ್ಟೆ, ಏಮಾಜೆ, ಅನಂತಾಡಿ, ಬಂಟ್ರಿಂಜೆ ಹಾಗೂ ಮಾಣಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಕಲಿಕಾ ಹಬ್ಬದ ಆಶಯ ಗೀತೆಯನ್ನು ಹಾಡಲಾಯಿತು. ಮಕ್ಕಳಿಗೆ ಕಲಿಕಾ ತರಬೇತಿಗಳನ್ನು ನೀಡಲಾಯಿತು.

ಕಲಿಕಾ ಹಬ್ಬದ ತರಗತಿಗಳನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಿದ್ದು ಕಾರ್ಯಕ್ರಮದ ನೆನಪಿಗಾಗಿ ಸೆಲ್ಫೀ ಕಾರ್ನರ್ ನ ವ್ಯವಸ್ಥೆ ಕಲ್ಪಿಸಲಾಗಿತ್ತು. ನೇರಳಕಟ್ಟೆ ಶಾಲಾ ಮುಖ್ಯ ಶಿಕ್ಷಕಿ ಕುಸುಮ ಸ್ವಾಗತಿಸಿ, ಸಹ ಶಿಕ್ಷಕಿ ಗೀತಾ ಕುಮಾರಿ ವಂದಿಸಿದರು.ಅನಂತಾಡಿ ಶಾಲಾ ಶಿಕ್ಷಕ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!