Wednesday, May 8, 2024
spot_imgspot_img
spot_imgspot_img

‘ನ್ಯಾಯಾಲಯಗಳಲ್ಲಿ ಜನವಿಶ್ವಾಸಕ್ಕಾಗಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಿ’-ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ನ್ಯಾಯ ವ್ಯವಸ್ಥೆ ಮೇಲೆ ಜನವಿಶ್ವಾಸ ವರ್ಧಿಸಲು ಮತ್ತು ನ್ಯಾಯಾಲಯಗಳೊಂದಿಗೆ ಸಂಪರ್ಕ ಸಾಧಿಸಲು ಸ್ಥಳೀಯ ಭಾಷೆಗಳ ಬಳಕೆಗೆ ನ್ಯಾಯಾಲಯಗಳಲ್ಲಿ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಜಂಟಿ ಸಮ್ಮೇಳನ ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು, ನ್ಯಾಯ ವ್ಯವಸ್ಥೆಯಲ್ಲಿ ಜನಸಾಮಾನ್ಯರ ವಿಶ್ವಾಸ ಹೆಚ್ಚಲು ಸ್ಥಳೀಯ ಭಾಷೆಗಳ ಬಳಕೆ ಅಗತ್ಯ ಎಂದರು.

ಹಳೆಯದಾದ ಕಾನೂನು ರದ್ದುಗೊಳಿಸಿ ನ್ಯಾಯ ವಿತರಣೆ ಸುಲಭ ಸಾಧ್ಯವಾಗುವ ನಿಟ್ಟಿನಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ತ್ವರಿತ ನ್ಯಾಯ ವ್ಯವಸ್ಥೆ ಜನರಿಗೆ ಸಿಗಬೇಕು. ಕೇಂದ್ರವು ಅನಗತ್ಯ ಕಾನೂನುಗಳನ್ನು ಗುರುತಿಸಿ ಆ ಪೈಕಿ 1,450 ಕಾನೂನುಗಳನ್ನು ರದ್ದುಗೊಳಿಸುವ ಕೆಲಸವನ್ನು 2015ರಲ್ಲಿ ಮಾಡಿದೆ. ರಾಜ್ಯ ಸರ್ಕಾರಗಳು 75 ಕಾನೂನುಗಳನ್ನು ರದ್ದುಪಡಿಸಿವೆ ಎಂದರು.

ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮಾತನಾಡಿ, ಸಂವಿಧಾನದ ಮೂರು ಅಂಗಗಳೂ ತಮ್ಮ ಕರ್ತವ್ಯ ಮೆರೆಯುವಾಗ ಲಕ್ಷ್ಮಣ ರೇಖೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯೋನ್ಮುಖವಾಗಬೇಕು. ಮೂರು ಅಂಗಗಳ ನಡುವೆ ಸಾಮರಸ್ಯ ಮೂಡಿದಾಗ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ ಎಂದು ತಿಳಿಸಿದರು.

- Advertisement -

Related news

error: Content is protected !!