Thursday, May 2, 2024
spot_imgspot_img
spot_imgspot_img

ಪಂಚಕುಲದಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್​ಗೆ ಗೃಹ ಸಚಿವ ಅಮಿತ್ ಶಾ ಚಾಲನೆ

- Advertisement -G L Acharya panikkar
- Advertisement -

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಹರಿಯಾಣದ ಪಂಚಕುಲದಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್ 2021ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದ ಅತಿದೊಡ್ಡ ಕ್ರೀಡಾ ಸ್ಪರ್ಧೆ 2018ರಲ್ಲಿ ಕೇಂದ್ರ ಸರ್ಕಾರದಿಂದ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಭಾಗವಹಿಸಲಿದ್ದಾರೆ.

ಹಾಗೇ, ಹರಿಯಾಣ ರಾಜ್ಯ ಕ್ರೀಡಾ ಸಚಿವ ಸಂದೀಪ್ ಸಿಂಗ್ ಸೇರಿದಂತೆ ಹರಿಯಾಣದ ಇತರ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಒಟ್ಟಾರೆಯಾಗಿ, 2,262 ಹುಡುಗಿಯರು ಸೇರಿದಂತೆ 4,700 ಅಥ್ಲೀಟ್‌ಗಳು 25 ಕ್ರೀಡೆಗಳಲ್ಲಿ 269 ಚಿನ್ನ, 269 ಬೆಳ್ಳಿ ಮತ್ತು 358 ಕಂಚಿನ ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ. ಈ ಕ್ರೀಡಾ ಸ್ಪರ್ಧೆ ಇಂದು ಆರಂಭವಾಗಲಿದ್ದು, ಜೂನ್ 13ರವರೆಗೆ ನಡೆಯಲಿದೆ.

KIYG 2021ರಲ್ಲಿ ಭಾರತದ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇದು 5 ನಗರಗಳಲ್ಲಿ (ಪಂಚಕುಲ, ಶಹಬಾದ್, ಅಂಬಾಲಾ, ಚಂಡೀಗಢ ಮತ್ತು ದೆಹಲಿ) ನಡೆಯಲಿದೆ. ಈ ಸ್ಪರ್ಧೆ ಒಟ್ಟು 25 ಕ್ರೀಡೆಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ಭಾರತದ 5 ಸ್ಥಳೀಯ ಆಟಗಳಾದ ಕಲರಿಪಯಟ್ಟು, ತಂಗ್-ಟಾ, ಗಟ್ಕಾ, ಮಲ್ಲಕಂಬ ಮತ್ತು ಯೋಗಾಸನ ಕೂಡ ಇರಲಿದೆ.

- Advertisement -

Related news

error: Content is protected !!