Wednesday, July 22, 2026
spot_imgspot_img
spot_imgspot_img

ಪತಿ ಕ್ಯಾಚ್ ಬಿಟ್ಟಿದ್ದಕ್ಕೆ ಜೀವ ಬೆದರಿಕೆ; ಪಾಕಿಸ್ತಾನದಲ್ಲಿ ಭದ್ರತೆಯಿಲ್ಲ, ನಮ್ಮನ್ನು ರಕ್ಷಿಸಿ ಎಂದು ಮನವಿ

- Advertisement -
- Advertisement -

ಟಿ20 ವಿಶ್ವಕಪ್ ಸೆಮಿಫೈನಲ್’ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯಸಾಧಿಸಿದೆ. ಆದರೆ ಆಸ್ಟ್ರೇಲಿಯಾದ ವಿರುದ್ಧ ಸೋಲನ್ನು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಂದ ತಮಗೆ ಹಾಗೂ ಮಗುವಿಗೆ ಜೀವ ಭಯ ಇರುವುದಾಗಿ ವೇಗಿ ಹಸನ್ ಅಲಿ ಪತ್ನಿ ಶಾಮಿಯಾ ಆರ್ಜೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಸೋಲಿನ ನಂತರ ಹಸನ್ ಮತ್ತು ಅವರ ಭಾರತೀಯ ಪತ್ನಿಯನ್ನು ಗುರಿಯಾಗಿಸಿಟ್ಟುಕೊಂಡು ಬೆದರಿಕೆಗಳು ಬರತೊಡಗಿವೆ. ಅವರು ಭಾರತೀಯ ಮೂಲದ ಸಾಮಿಯಾ ಅರ್ಜು ಅವರನ್ನು ಮದುವೆಯಾಗಿದ್ದಾರೆ. ಇಬ್ಬರಿಗೂ ಒಂದು ಸಣ್ಣ ಹೆಣ್ಣು ಮಗುವೂ ಇದೆ. ಈಗ ಸೋಲಿನಿಂದ ತಬ್ಬಿಬ್ಬಾದ ಕೆಲವು ಅಭಿಮಾನಿಗಳು ಹಸನ್ ಮತ್ತು ಅವರ ಮಗಳು ಮತ್ತು ಅವರ ಪತ್ನಿಯನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕತೊಡಗಿದ್ದಾರೆ. ಈ ಬೆದರಿಕೆಗಳಿಂದಾಗಿ ಸಾಮಿಯಾ ತೀವ್ರ ಅಸಮಾಧಾನಗೊಂಡು, ಸಾಮಾಜಿಕ ಜಾಲತಾಣದಲ್ಲಿ ಮಗಳ ಜೊತೆ ಭಾರತಕ್ಕೆ ಬರುವ ಬಗ್ಗೆಯೂ ಮಾತನಾಡಿದ್ದಾರೆ.

ನಾನು ಭಾರತದವಳು ಎನ್ನಲು ತುಂಬಾ ಹೆಮ್ಮೆ ಪಡುತ್ತೇನೆ. ನಾನು ಪಾಕಿಸ್ತಾನದವನನ್ನು ಮದುವೆ ಆಗಿದ್ದೇನೆ ಎಂದ ಮಾತ್ರಕ್ಕೆ ಭಾರತವನ್ನು ಇಷ್ಟಪಡದಿರಲು ಸಾಧ್ಯವಿಲ್ಲ. ಈ ಮೊದಲು ನನ್ನ ಕುಟುಂಬ ಪೂರ್ತಿ ಹರಿಯಾಣದಲ್ಲಿ ನೆಲೆಸಿತ್ತು. ನಾನು ದುಬೈನ ಏರ್‌ಲೈನ್ಸ್ ಒಂದರಲ್ಲಿ ಇಂಜಿನಿಯರ್ ಆಗಿದ್ದೆ. ಆ ಸಂದರ್ಭದಲ್ಲಿ ಹಸನ್ ಅವರ ಪರಿಚಯವಾಗಿ ಮದುವೆಯಾಗಿದ್ದೇನೆ. ನಾನು ಭಾರತೀಯಳು, ನನಗೆ ಸಹಾಯ ಮಾಡಿ’ ಎಂದು ಅವರು ಕೋರಿದ್ದಾರೆ.

ಕೆಲವು ನಾಚಿಕೆಯಿಲ್ಲದ ಪಾಕಿಸ್ತಾನಿ ಅಭಿಮಾನಿಗಳು ನಮ್ಮ ಮಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಮತ್ತು ಅವಳಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಾಮಿಯಾ ಟ್ವೀಟ್ ನಲ್ಲಿ ಬರೆದಿದ್ದಾರೆ. ಇಲ್ಲಿ ಪಾಕಿಸ್ತಾನದಲ್ಲಿ ನಮ್ಮ ಭದ್ರತೆಗಾಗಿ ಉನ್ನತ ಪ್ರಾಧಿಕಾರದಿಂದ ನನಗೆ ಯಾವುದೇ ಭರವಸೆ ಸಿಗದಿದ್ದರೆ, ನಾನು ಭದ್ರತೆಗಾಗಿ ನನ್ನ ಹೆತ್ತವರೊಂದಿಗೆ ಭಾರತದ ಹರಿಯಾಣಕ್ಕೆ ಹೋಗುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

- Advertisement -

Related news

error: Content is protected !!