Friday, June 5, 2026
spot_imgspot_img
spot_imgspot_img

ಪತ್ನಿ ಮತ್ತು 8 ವರ್ಷದ ಮಗನನ್ನು ಕೊಂದು ತಾನು ಆತ್ಮಹತ್ಯೆ ಶರಣಾದ ಸಾಫ್ಟ್‌ವೇರ್ ಇಂಜಿನಿಯರ್

- Advertisement -
- Advertisement -

ಸಾಫ್ಟ್‌ವೇರ್ ಇಂಜಿನಿಯರ್, ತನ್ನ ಪತ್ನಿ ಹಾಗೂ 8 ವರ್ಷದ ಮಗನನ್ನು ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪುಣೆಯ ಔಂದ್ ಪ್ರದೇಶದಲ್ಲಿ ನಡೆದಿದೆ. ಸಂದೀಪ್ತೋ ಗಂಗೂಲಿ (44), ಪ್ರಿಯಾಂಕಾ (40) ಹಾಗೂ ತನಿಷ್ಕಾ (8) ಮೃತ ಪಟ್ಟವರು ಎಂದು ಗುರುತಿಸಲಾಗಿದೆ.

ಸ್ನೇಹಿತರು ಸಂದೀಪ್ತೋ ಹಾಗೂ ಪ್ರಿಯಾಂಕ್‍ನಿಗೆ ಎಷ್ಟೇ ಕರೆ ಮಾಡಿದರೂ ಸ್ವೀಕರಿಸಿದಿದ್ದನ್ನು ಗಮನಿಸಿದ ಬೆಂಗಳೂರಿನಲ್ಲಿದ್ದ ಸಹೋದರನಿಗೆ ತಿಳಿಸಿದ್ದಾರೆ. ಸಹೋದರ ಸ್ನೇಹಿತರೊಂದಿಗೆ ಸಂದೀಪ್ತೋ ಮನೆಗೆ ಭೇಟಿ ನೀಡಿದ್ದಾಗ ಫ್ಲ್ಯಾಟ್‍ಗೆ ಬೀಗ ಹಾಕಿರುವುದು ಕಂಡು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಂದೀಪ್ತೋ ಹಾಗೂ ಆತನ ಕುಟುಂಬಸ್ಥರು ನಾಪತ್ತೆ ಆಗಿದ್ದಾರೆ ಎಂದು ದೂರು ದಾಖಲಿಸಿದ್ದಾನೆ.

ಪೊಲೀಸರು ದಂಪತಿಯ ಮೊಬೈಲ್ ಫೋನ್‍ಗಳನ್ನು ಟ್ರ್ಯಾಕ್ ಮಾಡಲು ಪ್ರಯತ್ನಿಸಿದ ವೇಳೆ ಮೊಬೈಲ್ ಫ್ಲ್ಯಾಟ್‍ನಲ್ಲಿ ಇರುವುದು ಪತ್ತೆಯಾಗಿದೆ. ಸಂದೀಪ್ತೋ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತ್ನಿ ಹಾಗೂ ಮಗುವಿನ ಮುಖಕ್ಕೆ ಪಾಲಿಥಿನ್‍ನನ್ನು ಸುತ್ತಿ ಹತ್ಯೆ ಮಾಡಿರುವುದು ಕಂಡುಬಂದಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್‍ಗಳು ಪತ್ತೆಯಾಗಿಲ್ಲ ಹಾಗೂ ಸುದೀಪ್ತೋ ತನ್ನ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸಾಫ್ಟ್‌ವೇರ್ ಕಂಪನಿಯ ಉದ್ಯೋಗವನ್ನು ತೊರೆದಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!