Sunday, June 21, 2026
spot_imgspot_img
spot_imgspot_img

ಪಾಣೆಮಂಗಳೂರು: ನೂತನ ಸೇತುವೆ ಬಳಿ ಬೈಕ್ ನಿಲ್ಲಿಸಿ ಯುವಕ ನಾಪತ್ತೆ!

- Advertisement -
- Advertisement -

ಪಾಣೆಮಂಗಳೂರು: ನೂತನ ಸೇತುವೆ ಬಳಿ ಬೈಕೊಂದನ್ನು ನಿಲ್ಲಿಸಿ ಸವಾರ ಮಾತ್ರ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಈ ಬೈಕ್ ಸತ್ಯವೇಲು ಎಂಬ ಯುವಕನಿಗೆ ಸೇರಿದ್ದು ಎನ್ನಲಾಗಿದೆ. ಈ ಹಿಂದೆ ಕೂಡ ಈತ ಬೆಂಗಳೂರಿನಿ0ದ ಬಂದು ಆತ್ಮಹತ್ಯೆಗೆ ಯತ್ನಿಸಿದ್ದು, ನಂತರ ಸ್ಥಳೀಯರು ರಕ್ಷಿಸಿದ್ದರು ಎಂದು ತಿಳಿದು ಬಂದಿದೆ.

ಇದೀಗ ಬೈಕ್ ಪೊಲೀಸರ ವಶದಲ್ಲಿದ್ದು ಯುವಕನ ಹುಡುಕಾಟ ನಡೆಸಲಾಗುತ್ತಿದೆ. ಜುಲೈ 17 ರಂದು ತಾಯಿಯಿಂದ ಇನ್ನೂರು ರೂಪಾಯಿ ಪಡೆದು ಕೆಲಸಕ್ಕೆಂದು ಹೊರಟಿದ್ದ ಯುವಕ ಈಗ ನಾಪತ್ತೆಯಾಗಿದ್ದಾನೆ. ಈತ ಆನ್ಲೈನ್ ಗೇಮ್ ನಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

- Advertisement -

Related news

error: Content is protected !!