Saturday, May 18, 2024
spot_imgspot_img
spot_imgspot_img

ಪಾರಂಪರಿಕ ಕಟ್ಟಡ ನೆಲಸಮಕ್ಕೆ ಸರ್ಕಾರ ನಿರ್ಧಾರ: ಪ್ರತಿಭಟನೆಗೆ ಇಳಿದ ಮೈಸೂರ ಒಡೆಯ

- Advertisement -G L Acharya panikkar
- Advertisement -

ಮೈಸೂರು: ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಪಾರಂಪರಿಕ ಕಟ್ಟಡಗಳನ್ನು ನೆಲಸಮ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಸ್ವತಃ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೇ ಪ್ರತಿಭಟನೆಗೆ ಇಳಿದಿದ್ದಾರೆ.

ಮೈಸೂರು ಜನತೆ ಮತ್ತು ರಾಜಮನೆತನದ ವಿರೋಧದ ನಡುವೆಯೂ ಸರ್ಕಾರ ಈ ಕಟ್ಟಡಗಳನ್ನು ಕೆಡವಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಬುಧವಾರ ಮಧ್ಯಾಹ್ನದವರೆಗೆ ಅಂಗಡಿಗಳನ್ನು ಮುಚ್ಚಿ ಹೋರಾಟಕ್ಕೆ ಇಳಿದಿದ್ದಾರೆ.

ವ್ಯಾಪಾರಸ್ಕರಿಗೆ ಸಾಥ್ ನೀಡಿ ಮೈಸೂರು ಮಹಾರಾಜರು ಕೂಡಾ ಪ್ರತಿಭಟನೆಗೆ ಧುಮುಕಿದ್ದಾರೆ. ಪ್ರತಿಭಟನಾ ಮೆರವಣಿಗೆಗೆ ಬುಧವಾರ ಚಾಲನೆ ನೀಡಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಈ ಕಟ್ಟಡಗಳನ್ನು ಉಳಿಸಲು ನಿಮ್ಮೊಂದಿಗೆ ನಾನೂ ಹೋರಾಡುತ್ತಿದ್ದೇನೆ. ಇನ್ನೂ ನೂರು ವರ್ಷ ಉಳಿಸಬಹುದಾದ ಕಟ್ಟಡಗಳನ್ನು ಧ್ವಂಸ ಮಾಡುವ ಸರ್ಕಾರದ ಕ್ರಮ ಸರಿಯಲ್ಲ. ಮೈಸೂರಿನ ಕಲೆ ಎಂದುಕೊಂಡ ಇವುಗಳನ್ನು ಮುಂದಿನ ಪೀಳಿಗೆಗೂ ಉಳಿಸಬೇಕು. ನಾವು ಅನುಭವಿಸಿದ ಪರಂಪರೆ ಅವರಿಗೂ ದಕ್ಕುವಂತಾಗಬೇಕು.ಕಟ್ಟಡದೊಂದಿಗೆ ಪರಂಪರೆ ಉಳಿಕೆಗೂ ನಾವು ಹೋರಾಡುತ್ತಿದ್ದೇವೆ ಎಂದರು.

ಎರಡೂ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ಕಟ್ಟಡಗಳ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶ. ಆದರೆ, ನಗರ ಪಾಲಿಕ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘವು ಕಟ್ಟಡ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ರಾಜಮನೆತನದ ಪ್ರಮೋದಾದೇವಿ ಒಡೆಯರ್‌ ಹಾಗೂ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಟ್ಟಡ ನೆಲಸಮ ಮಡಲುಆರಂಭದಿಂದಲೇ ವಿರೋಧ ವ್ಯಕ್ತಪಡಿಸಿದರು.

ಈ ಪಾರಂಪರಿಕ ಕಟ್ಟಡಗಳನ್ನು ಕೆಡವಲು ನಾವು ಬಿಡುವುದಿಲ್ಲ. ಇದನ್ನು ಕೆಡವಿದರೆ ಮುಂದೆ ನಗರದಲ್ಲಿರುವ ಇತರ ಪಾರಂಪರಿಕ ಕಟ್ಟಡಗಳಿಗೂ ಅಸ್ತಿತ್ವ ಇಲ್ಲದಂತಾಗಬಹುದು. ಕಟ್ಟಡ ಕೆಡವದಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಮನವಿಗೆ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಮುಂದೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ನಗರ ಪಾಲಿಕ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಎಸ್. ಮಹಾದೇವ್‌ ತಿಳಿಸಿದ್ದಾರೆ.

- Advertisement -

Related news

error: Content is protected !!