Saturday, May 4, 2024
spot_imgspot_img
spot_imgspot_img

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿ. ವಿಟ್ಲ ಇದರ ವತಿಯಿಂದ ಫೈಬರ್ ದೋಟಿ ಕೌಶಲ್ಯ ತರಬೇತಿ ಕಾರ್ಯಕ್ರಮ

- Advertisement -G L Acharya panikkar
- Advertisement -

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ವಿಟ್ಲ ಇದರ ವತಿಯಿಂದ ಫೈಬರ್ ದೋಟಿ ಕೌಶಲ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಪಿಂಗಾರ ಕಂಪೆನಿಯ ಅಧ್ಯಕ್ಷರಾದ ರಾಮಕಿಶೋರ್ ಮಂಚಿ ಇವರ ತೋಟದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಿವರಾಮ್ ಭಟ್ ಕಜೆ ವಹಿಸಿದ್ದರು. ಕ್ಯಾಂಪ್ಕೋ ಉಪಾಧ್ಯಕ್ಷರಾದ ಶಂಕರನಾರಾಯಣ ಖಂಡಿಗ ದೀಪಬೆಳಗಿಸಿ ಉದ್ಘಾಟಿಸಿದರು. ಕ್ಯಾಂಪ್ಕೋ ಕಂಪೆನಿಯ ನಿಕಟಪೂರ್ವ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಂಪೆನಿಗೆ ಶುಭ ಹಾರೈಸಿದರು. ಪಿಂಗಾರ ಕಂಪೆನಿಯ ಅಧ್ಯಕ್ಷ ರಾಮಕಿಶೋರ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ ಪಟ್ಟಾಜೆ ಪಿಂಗಾರ ಕಂಪೆನಿಯ ನಿರ್ದೇಶಕರಾದ ಪುಷ್ಪ ಎಸ್. ಕಾಮತ್, ಕೃಷ್ಣಮೂರ್ತಿ ಕಟ್ಟೆ , ರಮೇಶ್ ಎನ್, ಜಯರಾಮ ರೈ ಬೋಳಂತೂರು, ದಿವಾಕರ ನಾಯಕ್, ವಿಶ್ವನಾಥ್ ನಾಯ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಎಸ್ ಉಪಸ್ಥಿತರಿದ್ದರು.ರಮೇಶ್ ಎನ್ ವಂದಿಸಿದರು. ಒಟ್ಟು 16 ಶಿಭಿರಾರ್ಥಿಗಳು ಭಾಗವಹಿಸಿ ತರಬೇತಿ ಪಡೆದರು.

ಫೈಬರ್ ದೋಟಿ ಕೌಶಲ್ಯ ತರಬೇತಿ ಕಾರ್ಯಕ್ರಮದ ಪ್ರಾತಿಕ್ಷತೆಯು ಫೆ. 15ರಂದು ನಡೆಯಿತು. ತರಬೇತಿಯಲ್ಲಿ ಫೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ವಿಧಾನ, ಮದ್ದು ಸಿಂಪಡಣೆಯ ಕುರಿತಾದ ಸಮಗ್ರ ಮಾಹಿತಿ ನೀಡಲಾಯಿತು. ಬೆಂಗಳೂರಿನ ಶ್ರೀ ಬಾಲಸುಬ್ರಹ್ಮಣ್ಯ ಇವರು ಫೈಬರ್ ದೋಟಿಯ ಬಗ್ಗೆ ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು.

ಪಿಂಗಾರ ಕಂಪೆನಿಯ ಅಧ್ಯಕ್ಷ ರಾಮಕಿಶೋರ್ ಮತ್ತು ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಎಸ್, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀಪಡ್ರೆ ಹಾಗೂ ಪಿಂಗಾರ ಕಂಪೆನಿಯ ಸದಸ್ಯರು ಉಪಸ್ಥಿತರಿದ್ದರು. ಪಿಂಗಾರ ಕಂಪೆನಿಯ ಫೈಬರ್ ದೋಟಿ ಕೌಶಲ್ಯ ಪಡೆದು ಶಿಭಿರಾರ್ಥಿಗಳು ಪ್ರಾತಿಕ್ಷತೆ ನೀಡಿದರು.

- Advertisement -

Related news

error: Content is protected !!