Thursday, March 28, 2024
spot_imgspot_img
spot_imgspot_img

ಪುಣಚ: ಏ. 7 ರಿಂದ 11ರ ವರೆಗೆ ಶ್ರೀ ಮಹಿಷಮರ್ದಿನೀ ದೇವಸ್ಧಾನದಲ್ಲಿ ವರ್ಷಾವಧಿ ಜಾತ್ರೆ

- Advertisement -G L Acharya panikkar
- Advertisement -
vtv vitla

ಪುಣಚ: ಶ್ರೀ ಮಹಿಷಮರ್ದಿನೀ ದೇವಸ್ಧಾನ, ವರ್ಷಾವಧಿ ಜಾತ್ರೆಯು ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಏ. 7 ರಿಂದ 11ರ ವರೆಗೆ ನಡೆಯಲಿರುವುದು ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಏ. 2ರಂದು ಬೆಳಗ್ಗೆ 9.5ಕ್ಕೆ ಗೊನೆ ಮುಹೂರ್ತ ನಡೆಯಲಿದೆ. ಏ. 6ರಂದು ಸಂಜೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ ನಡೆಯಲಿದೆ.

ಏ. 7ರಂದು ಬೆಳಗ್ಗೆ ಗಣಪತಿ ಹೋಮ, ಧ್ವಜಾರೋಹಣ, ನಿತ್ಯ ಬಲಿ ನಂತರ ರಾತ್ರಿ ಭೂತ ಬಲಿ ಉತ್ಸವ ನಡೆಯಲ್ಲಿದೆ. ಏ. 8ರಂದು ಬೆಳಗ್ಗೆ 9.00ಕ್ಕೆ ದೀಪ ಬಲಿ, ದರ್ಶನ ಬಲಿ, ಹಾಗೂ ರಾತ್ರಿ ಭೂತ ಬಲಿ ಉತ್ಸವ ನಡೆಯಲಿದೆ.

ಏ. 9ರಂದು ಬೆಳಗ್ಗೆ ದೀಪ ಬಲಿ, ದರ್ಶನ ಬಲಿ ಹಾಗೂ ರಾತ್ರಿ ಭೂತ ಬಲಿ, ಕೆರೆಕಟ್ಟೆ ಉತ್ಸವ ನಡೆಯಲಿದೆ. ಏ.10ರಂದು ಬೆಳಗ್ಗೆ ದೀಪ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಅನ್ನಸಂರ್ಪಣೆ ಅದೇ ದಿನ ರಾತ್ರಿ ಉತ್ಸವ ಬಲಿ, ದರ್ಶನ ಬಲಿ, ಬೆಡಿಕಟ್ಟೆ ಉತ್ಸವ, ಸಿಡಿಮದ್ದು ಪ್ರದರ್ಶನ, ಮೃಗ ಬೇಟೆ ಸವಾರಿ, ನಿತ್ಯಪೂಜೆ, ಶ್ರೀ ಭೂತ ಬಲಿ , ಶಯನ ನಡೆಯಲಿದೆ.

ಏ.11ರಂದು ಬೆಳಗ್ಗೆ ಕವಾಟೋದ್ಫಾಟನೆ, ತೀರ್ಥಪ್ರಸಾದ ವಿತರಣೆ, ತುಲಾಭಾರ ಸೇವೆ ಹಾಗೂ ರಾತ್ರಿ ಪಡುಪೇಟೆ ಸವಾರಿ, ಅವಭೃತ ಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ನೆತ್ತರ್‍ ಕಣ, ವ್ಯಾಘ್ರ ಚಾಮುಂಡಿ ಪರಿವಾರ ದೈವಗಳಿಗೆ ನೇಮ ನಡೆಯಲಿರುವುದು. ಪ್ರತಿ ದಿನ ರಾತ್ರಿ ಸಾಂಸ್ಕೃತಿಕ ಕರ್ಯಕ್ರಮಗಳು ಜರಗಲಿದೆ.

- Advertisement -

Related news

error: Content is protected !!