Sunday, May 5, 2024
spot_imgspot_img
spot_imgspot_img

ಪುತ್ತೂರಿನ ಹಿರಿಯ ಮುಖಂಡರಿಗೆ ಕರೆ ಮಾಡಿ ಪುತ್ತಿಲರನ್ನು ಎಂ ಎಲ್ ಸಿ ಮಾಡುವುದಾಗಿ ರಾಜ್ಯಾಧಕ್ಷರಿಂದ ಸಂದೇಶ ರವಾನೆ

- Advertisement -G L Acharya panikkar
- Advertisement -

ಸಂಘ ಪರಿವಾರದ ಪ್ರಭಾವಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಿಂದೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಇಂದು ನಾಮಪತ್ರ ಸಲ್ಲಿಸಿದ್ದು ಈ ಸಂದರ್ಭ ಮೆರವಣಿಗೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ.

ಕಳೆದ ಬಾರಿ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲೂ ಅರುಣ್ ಕುಮಾರ್ ಪುತ್ತಿಲರವರ ಹೆಸರು ಅಂತಿಮ ಹಂತದವರೆಗೂ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕೇಳಿಬಂದಿದ್ದು ಕೊನೆಯ ಹಂತದಲ್ಲಿ ಟಿಕೆಟ್ ವಂಚಿತಾರಾಗಿದ್ದರು. ಆ ಬಾರಿ ಟಿಕೆಟ್ ಸಂಜೀವ ಮಠಂದೂರು ರವರ ಪಾಲಾಗಿತ್ತು. ಈ ಬಾರಿ ವಿಧಾನ ಸಭಾ ಚುನಾವಣೆ ಸದ್ದು ಮಾಡುತ್ತಿದ್ದಂತೆಯೇ ಪುತ್ತೂರಿನ ಎಲ್ಲಾ ಹಿಂದೂ ಕಾರ್ಯಕರ್ತರ ಬಾಯಲ್ಲಿ ಮೊಳಗಿದ ಒಂದು ಹೆಸರು ಅರುಣ್ ಕುಮಾರ್ ಪುತ್ತಿಲ.. ಈ ಬಾರಿ ಅರುಣ್ ಕುಮಾರ್ ಪುತ್ತಿಲರವರಿಗೆ ಅವಕಾಶ ನೀಡುವಂತೆ, ಅಭ್ಯರ್ಥಿಯಾಗಿ ಆಯ್ಕೆ ಮಾಡುವಂತೆ ಸಂಘ ಪಾರಿವಾರದ ಶಕ್ತಿಗಳು ಟ್ವಿಟರ್ ಅಭಿಯಾನದ ಮೂಲಕ “ಈ ಬಾರಿ ಪುತ್ತೂರಿಗೆ ಪುತ್ತಿಲ” ಎಂಬಂತೆ ಪ್ರಧಾನಿಯವರ ಗಮನಕ್ಕೆ ತರುವ ಮೂಲಕ ವ್ಯಾಪಾಕ ಪ್ರಚಾರ ಮಾಡಿದ್ದರು.

ಬಿಜೆಪಿಯ ಸರ್ವೇ ಕಾರ್ಯದಲ್ಲಿ ಅರುಣ್ ಕುಮಾರ್ ಪುತ್ತಿಲರವರ ಹೆಸರು ಕೇಳಿ ಬಂದಿದ್ದು, ಈ ಬರಿ ಅರುಣ್ ಪುತ್ತಿಲವರಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು.

ಆದ್ರೆ ಕೊನೆಗೂ ಪುತ್ತೂರಿನಲ್ಲಿ ನಡೆದಿದ್ದು ಜಾತಿ ರಾಜಕಾರಣ… ಇಷ್ಟಕ್ಕೂ ಇದರ ರೂವಾರಿ ಯಾರು ಅಂತೀರಾ ಅವ್ರೆ ನಮ್ಮ ನಳಿನನ್ನ..

ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಬೇಳೆ ಬೇಯಿಸಿಕೊಳ್ಳಲು ಪುತ್ತೂರು ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಕಳೆದ ಬಾರಿ ಚುನಾವಣ ಸಂದರ್ಭದಲ್ಲೂ ರಾಜ್ಯಾಧ್ಯಕ್ಷರು ಸಂಜೀವ ಮಠಂದೂರುರವರಿಗೆ ಸೀಟ್ ಸಿಗಬೇಕೆಂದು ತೀರ್ಮಾನಿಸಿ ಕೊನೆಗೂ ಸೀಟ್ ಗಿಟ್ಟಿಸಿಕೊಟ್ರು. ಈ ಬಾರಿಗೂ ನಡೆದದ್ದು ಅಷ್ಟೇ ಬಿಜೆಪಿಯ ಅಂತಿಮ ಪಟ್ಟಿಯಲ್ಲಿ ಕೊನೆಯ ಹಂತದವರೆಗೂ ಹಲವು ಬಿಜೆಪಿಯ ಘಟಾನುಘಟಿಗಳ ಹೆಸರು ಕೇಳಿ ಬಂದಿದ್ದು ಆದ್ರೆ ಕೊನೆಯದಾಗಿ ಆಶಾ ತಿಮ್ಮಪ್ಪ ಗೌಡರವರನ್ನು ಆಯ್ಕೆ ಮಾಡಲಾಯಿತು.

ಇಂದು ನಡೆದ ಅರುಣ್ ಕುಮಾರ್ ಪುತ್ತಿಲರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಜಮಾಯಿಸಿ ತಮ್ಮ ಬೆಂಬಲವನ್ನು ಸೂಚಿಸಿದ್ದು.. ಹಿಂದೂಪರ ಧ್ವನಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ ಅರುಣ್ ಕುಮಾರ್ ಪುತ್ತಿಲರವರಿಗೆ ಕಾರ್ಯಕರ್ತರು ನೀಡಿದ ಬೆಂಬಲವು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಮುಖಂಡರ ಎದೆಯಲ್ಲಿ ನಡುಕ ಉಂಟು ಮಾಡಿದೆ.

ಪ್ರವೀಣ್ ನೆಟ್ಟಾರ್ ಹತ್ಯೆ ವೇಳೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರವರ ಕಾರಿಗೆ ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದೀಗ ರಾಜ್ಯಾಧ್ಯಕ್ಷರಲ್ಲಿ ಇನ್ನಷ್ಟು ನಡುಕ ಉಂಟಾಗಿದ್ದು ಹೀಗಾಗಿ ಪುತ್ತೂರಿನ ಹಿರಿಯ ಬಿಜೆಪಿ ಮುಖಂಡರೊಬ್ಬರಿಗೆ ಕರೆ ಮಾಡಿ ಎಂ ಎಲ್ ಸಿ ಮಾಡುವುದಾಗಿ ಸಂದೇಶ ರವಾನಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಪುತ್ತೂರಿನ ರಾಜಕೀಯ ಕ್ಷೇತ್ರವನ್ನು ಕೆಡಿಸುತ್ತಿರುವುದು ನಳಿನ್ ಕುಮಾರ್ ಕಟೀಲ್ ಬಿಟ್ರೆ ಬೇರೆ ಯಾರು ಅಲ್ಲ, ಇವತ್ತು ಪುತ್ತೂರಿನ ಹಿಂದೂ ಜನಸಾಗರ ನೋಡಿ.. ನಿನ್ನೆ ಮೊನ್ನೆ ಬಂದ ಕೆಲವೊಂದು ಬಕೆಟ್ ಗಳು ಇನ್ನಾದರೂ ಹಿಂದುತ್ವ ಏನು ಎಂದು ತಿಳಿದುಕೊಳ್ಳಿ.. ಬಂಡೆಕಲ್ಲನ್ನು ತಂದು ಪುತ್ತೂರಿನಲ್ಲಿ ನಿಲ್ಲಿಸಿದ್ರೂ ಜನಗಳು ಮತ ಹಾಕಿ ವಿನ್ ಮಾಡ್ತಾರೆ ಅನ್ನೋ ಭ್ರಮೆ ಇದ್ದರೆ ಅದನ್ನು ಮೊದಲು ಬಿಟ್ಟು ಬಿಡಿ.. “ನಳಿನನ್ನ ಗ್ ಗೊತ್ತಾನಗ ಪೊರ್ತಾಂಡ್” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!