Saturday, April 27, 2024
spot_imgspot_img
spot_imgspot_img

ಪುತ್ತೂರು: ಅನ್ಯಕೋಮಿನ ಯುವತಿಯನ್ನು ಭೇಟಿ ಮಾಡಲು ಬಂದ ರಾಯಚೂರಿನ ಯುವಕನಿಗೆ ಅನ್ಯಕೋಮಿನ ಯುವಕರಿಂದ ಹಲ್ಲೆ ಆರೋಪ; ಯುವಕನಿಂದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

- Advertisement -G L Acharya panikkar
- Advertisement -

ಪುತ್ತೂರು: ರಾಯಚೂರು ಮೂಲದ ಹಿಂದೂ ಯುವಕ ಪುತ್ತೂರು ಮೂಲದ ಅನ್ಯಕೋಮಿನ ಯುವತಿಯರು ಮತ್ತು ಹಿಂದೂ ಯುವತಿ ಜೊತೆ ಪುತ್ತೂರಿನ ಲಾಡ್ಜ್ ನಲ್ಲಿ ರೂಮ್ ಬುಕ್ ಮಾಡಲು ತೆರಳಿದ್ದು ಈ ಬಗ್ಗೆ ತಿಳಿದ ಅನ್ಯಕೋಮಿನ ಯುವಕರು ಹಿಂದೂ ಯುವಕರನ್ನೂ ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸಿದ ಘಟನೆ ಸೆ.1 ರಂದು ನಡೆದಿದ್ದು, ರಾಯಚೂರು ಮೂಲದ ಯುವಕ ಹನುಮಂತರಾಯ ಹಲ್ಲೆ ನಡೆಸಿದ ಅನ್ಯಕೋಮಿನ ಯುವಕರ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ದದ್ದಲ ಗ್ರಾಮ , ಮಾನ್ವಿ ತಾಲೂಕು, ರಾಯಚೂರು ಜಿಲ್ಲೆ ಯ ಹನುಮಂತರಾಯ ಎಂಬವರಿಗೆ ಸುಮಾರು 6 ತಿಂಗಳಿಂದ ಮಂಗಳೂರಿನ ಪುತ್ತೂರು ವಾಸಿ ಯುವತಿ ಶೇರ್‌ ಚಾಟ್‌ ನಿಂದ ಪರಿಚಯವಾಗಿದ್ದು, ಆ ಬಳಿಕ ಹನುಮಂತನಿಗೆ ಯುವತಿಯೊಂದಿಗೆ ಫೋನ್‌ ಕರೆಯಲ್ಲಿ ಮೆಸೇಜ್‌ ಮಾಡಿ ಸಂಪರ್ಕದಲ್ಲಿ ಇದ್ದು , ಈ ವಿಚಾರವನ್ನು ಹನುಮಂತ ತನ್ನ ಸ್ನೇಹಿತ ಚೌಡಯ್ಯನೊಂದಿಗೆ ಹೇಳಿದ್ದರು.

ಒಂದು ವಾರದ ಹಿಂದೆ ಯುವತಿ ಫೋನ್‌ ಕರೆ ಮಾಡಿ ಹನುಮಂತನನ್ನು ಪುತ್ತೂರಿಗೆ ಬರುವಂತೆ ತಿಳಿಸಿದ್ದು, ಆ.31 ರಂದು ರಾತ್ರಿ 7.30ಕ್ಕೆ ಮಾನ್ವಿಯಿಂದ ಮಂಗಳೂರಿಗೆ ಬಂದು ಅಲ್ಲಿಂದ 10.15 ಕ್ಕೆ ಮಂಗಳೂರಿನಿಂದ ಪುತ್ತೂರಿಗೆ ಬರುವ ಬಸ್ಸಿನಲ್ಲಿ ಪುತ್ತೂರಿಗೆ ಬಂದಾಗ, ಯುವತಿ ಪುತ್ತೂರು ಬಸ್ಸು ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದು, ಆ ಸಮಯ ಯುವತಿ ಹಾಗೂ ಆಕೆಯ ಸ್ನೇಹಿತೆ, ಹನುಮಂತ ಹಾಗೂ ಅವನ ಸ್ನೇಹಿತ ಚೌಡಯ್ಯ ಬಸ್ಸು ನಿಲ್ದಾಣದ ಒಳಗಿರುವ ಪ್ರಯಾಣಿಕರು ಕುಳಿತುಕೊಳ್ಳುವ ಆಸನದಲ್ಲಿ ಕುಳಿತುಕೊಂಡು ಮಾತನಾಡುತ್ತಿರುವಾಗ 4-5 ಜನ ಯುವಕರು ಇವರ ಬಳಿಗೆ ಬಂದು ಸುತ್ತುವರಿದು ತಡೆದು ನಿಲ್ಲಿಸಿ ಹನುಮಂತನ ಬಳಿ ಊರು ಹೆಸರು ವಿಚಾರಿಸಿ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಊರಿಗೆ ಬಂದು ನಮ್ಮ ಜಾತಿಯ ಹುಡುಗಿಯೊಂದಿಗೆ ಮಾತನಾಡುತ್ತೀರಾ ನಿಮಗೆ ಎಷ್ಟು ಅಹಂಕಾರ ಎಂದು ಬೈದು ಕೈಗಳಿಂದ ಹನುಮಂತ ಮತ್ತು ಚೌಡಯ್ಯನಿಗೆ ಹೊಡೆದು ಕಾಲಿನಿಂದ ತುಳಿದು ನಮ್ಮ ಮುಸ್ಲಿಂ ಹುಡುಗಿಯರ ಸುದ್ದಿಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಹನುಮಂತ ದೂರಿನಲ್ಲಿ ತಿಳಿಸಿದ್ದಾನೆ.

ಈ ಬಗ್ಗೆ ಠಾಣೆಯಲ್ಲಿ ಅ.ಕ್ರಂ 65/2021, ಕಲಂ: 143, 147, 341, 504, 323, 506 ಜೊತೆ 149 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!