Friday, August 7, 2026
spot_imgspot_img
spot_imgspot_img

ಪುತ್ತೂರು: ಅಪರಿಚಿತನಿಂದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ; ತಲೆ ಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶಕ್ಕೆ

- Advertisement -
- Advertisement -

ಪುತ್ತೂರು: ಅಪರಿಚಿತ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ವೆಸಗಿದ ಘಟನೆ ಎ.21 ರಂದು ಪುತ್ತೂರು ತಾಲೂಕಿನ ಕಾವು ಸೇತುವೆ ಬಳಿ ನಡೆದಿದ್ದು ತಲೆಮಾರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪ್ರಾಪ್ತ ಬಾಲಕನೊಬ್ಬ ತನ್ನ ಅಜ್ಜಿ ಜೊತೆ ಸೊಸೈಟಿಗೆ ತೆರಳಿ ಬರುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಬಾಲಕನ ಬಳಿ ಬಂದು ಅಜ್ಜಿ ಮನೆಗೆ ಬಿಡುತ್ತೇನೆ ಬಾ ಎಂದು ಹೇಳಿದ್ದು ಬಾಲಕ ಬರುವುದಿಲ್ಲ ಎಂದಿದ್ದು ಆಗ ಬಾಲಕನ ತಂದೆಯ ಹೆಸರು ಹೇಳಿ ಬಾ ನಿನ್ನನ್ನು ಮನೆಗೆ ಬಿಡುತ್ತೇನೆ ಎಂದು ಹೇಳಿ ಒತ್ತಾಯಿಸಿದ್ದಾನೆ.

ಬಾಲಕ ಬೈಕ್ ನಲ್ಲಿ ಕುಳಿತುಕೊಂಡ ನಂತರ ವ್ಯಕ್ತಿಯು ಬೈಕ್ ಅನ್ನು ಈಶ್ವರಮಂಗಲ ಕಡೆಗೆ ಕರೆದುಕೊಂಡು ಹೋಗಿದ್ದು, ಕಾಡಿಗೆ ಕರೆದುಕೊಂಡು ಹೋಗಿ ಬಾಲಕನ ಮೇಲೆ ಅತ್ಯಾಚಾರವೆಸಗಿ, ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು.

ಕಾಸರಗೋಡು ಜಿಲ್ಲೆಯ ನೆಕ್ರಾಜೆ ನಿವಾಸಿ ಶ್ರೀಜಿತ್ (27) ಎಂಬಾತ ಆರೋಪಿ.

ಆರೋಪಿ ಶ್ರೀಜಿತ್ ತಲೆಮರೆಸಿಕೊಂಡಿದ್ದು, ಪೊಲೀಸ್ ನಿರೀಕ್ಷರಾದ ಉಮೇಶ್ ಉಪ್ಪಲಿಗೆ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕಾರಾದ ಉದಯ ರವಿ ಎಂ. ವೈ ಹಾಗೂ ಸಿಬ್ಬಂದಿಗಳಾದ, ಹೆಡ್ ಕಾನ್ಸ್ಟೇಬಲ್ ಗಳಾದ ಅದ್ರಂ, ಪ್ರವೀಣ್ ರೈ ರವರ ತಂಡ ದಸ್ತಗಿರಿ ಮಾಡಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

- Advertisement -

Related news

error: Content is protected !!