Friday, May 10, 2024
spot_imgspot_img
spot_imgspot_img

ಪುತ್ತೂರು: ಕಾರ್ಣಿಕ ಮೆರೆದ ದೈವಶಕ್ತಿ; ಪೋಟೋ ತೆಗೆಯುವ ವೇಳೆ ಕಂಡಿತು ದೈವದ ಪ್ರತಿಬಿಂಬ..!!

- Advertisement -G L Acharya panikkar
- Advertisement -
vtv vitla

ಪುತ್ತೂರು: ದೈವಗಳನ್ನು ನಂಬಿಕೊಂಡು ಬದುಕು ಕಟ್ಟಿಕೊಳ್ಳುವ ತುಳುನಾಡಿನ ಜನತೆಗೆ ಈಗ ಕೋಲ ನೇಮಗಳ ಹಬ್ಬ. ಹಾಗೆಯೇ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಬನ್ನೂರು ಜೈನರ ಗುರಿಯಲ್ಲಿ ಪಂಜುರ್ಲಿ ಮತ್ತು ಗುಳಿಗನ ವರ್ಷಾವಧಿ ನೇಮ ನಡೆಯಿತು. ನಾಗಬನದ ಜೊತೆಗೆ ಗುಳಿಗನ ಮತ್ತು ಪಂಜುರ್ಲಿ ದೈವಗಳ ಕಾರಣಿಕ ಇರುವ ಈ ಪುಣ್ಯ ಮಣ್ಣಿನಲ್ಲಿ ಫೆಬ್ರವರಿ 19 ವರ್ಷಾವಧಿ ನೇಮಕ್ಕೆ ಖಾಯಂ ದಿನಾಂಕ. ಈ ಸಂದರ್ಭದಲ್ಲಿ ಅಚ್ಚರಿಯಾದರೂ ಸತ್ಯ ಘಟನೆಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಕ್ಷಾತ್ ದೈವ ದರ್ಶನವಾಗಿದೆ. ಇದರ ಸ್ವೀಕಾರ ನಮ್ಮ ನಮ್ಮ ನಂಬಿಕೆಗೆ ಬಿಟ್ಟದ್ದು.

ಆಕಾಶ ಬಿಟ್ಟು ಭೂಮಿ ಬಂದು ಭೂಮಿಯಲ್ಲಿ ನಂಬಿದ ಜನರಿಗೆ ಇಂಬು ಕೊಡುವ ದೈವಗಳು ಶಕ್ತಿಯ ಸೆಲೆಗಳು. ಗುಳಿಗ ಮತ್ತು ಪಂಜುರ್ಲಿ ದೈವಗಳು ಕಾರಣಿಕದ ಶಕ್ತಿಗಳು. ಅದೆಷ್ಟೋ ಮಾಯಕದ ಮೋಡಿಗಳನ್ನು ಮಾಡಿ ಸತ್ಯ ದರ್ಶನ ಮಾಡುತ್ತಿರುವ ಶಕ್ತಿಗಳು. ಮುಕ್ಕಾಲು ಮೂರೂ ಗಳಿಗೆಯಲ್ಲಿ ಬಂದು ಹೋಗುವ ದೈವದ ಸಾಕ್ಷಾತ್ಕಾರ ಆಗುವುದು ಅವು ನಮ್ಮ ಜೊತೆ ನಿಂತು ಕೈ ಹಿಡಿದು ಕಾಪಾಡುವಾಗ. ದೈವ ನರ್ತಕ ಅಲ್ಲಿ ಬರಿಯ ನರ್ತಕನಾಗಿರುವುದಿಲ್ಲ. ಬದಲಾಗಿ ಶಕ್ತಿಯನ್ನು ಅಂತಃಕರಣದಲ್ಲಿ ಹೊತ್ತು ನಿಂತ ದೈವಾಂಶ ಸಂಭೂತನಾಗಿರುತ್ತಾನೆ. ದೈವವೂ ದೇವರೂ ನಾನೇ ಎಂದು ಸಾರುವ ಪಂಜುರ್ಲಿ ಮತ್ತು ಗುಳಿಗನ ಅವರ್ಣನೀಯ ಕಾರಣಿಕಾಗಳು ಕಣ್ಮುಂದೆ ಬಂದಾಗ ಅಚ್ಚರಿಗೊಳ್ಳುವುದು ಮಾತ್ರ ಅನುಭವ. ಹಾಗೆಯೇ ಕ್ಯಾಮೆರಾ ಕಣ್ಣಲ್ಲಿ ಕಂಡ ಸತ್ಯಗಳು ನಮ್ಮ ಸಂಸ್ಕೃತಿಯ ನಂಬಿಕೆಗಳಿಗೆ ಪುಷ್ಟಿ ಕೊಡುವಂತೆ ಇವೆ.

- Advertisement -

Related news

error: Content is protected !!