Tuesday, May 21, 2024
spot_imgspot_img
spot_imgspot_img

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; 8 ಮಂದಿಗೆ ಗಾಯ..!

- Advertisement -G L Acharya panikkar
- Advertisement -

ದಾಂಡೇಲಿ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಚಾಲಕ ಸೇರಿ ಕಾರಿನಲ್ಲಿದ್ದ 8 ಮಂದಿ ಗಾಯಗೊಂಡ ಘಟನೆ ದಾಂಡೇಲಿ ಅಂಬಿಕಾನಗರ ರಸ್ತೆಯಲ್ಲಿ ಬರುವ ಮೋಹಿನಿ ವ್ರತದ ಬಳಿ ನಡೆದಿದೆ.

ಕಾರಿನಲ್ಲಿದ್ದವರೆಲ್ಲಾ ಶಿರಸಿ ಮೂಲದವರು ಎಂದು ತಿಳಿದು ಬಂದಿದೆ.

ಮದುವೆ ಕಾರ್ಯಕ್ರಮಕ್ಕಾಗಿ ಶಿರಸಿಯಿಂದ ದಾಂಡೇಲಿಗೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ದಾಂಡೇಲಿ ನಗರದ ಸಮೀಪದಲ್ಲಿರುವ ಮೋಹಿನಿ ವೃತ್ತದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಕಾರಿನ ಮುಂಭಾಗದಲ್ಲಿ ಶಿರಸಿಯ ಸಂಕಲ್ಪ್ ಮತ್ತು ಚಾಲಕನಿಗೆ ಗಂಭೀರ ಗಾಯವಾಗಿದೆ. ಕಾರಿನಲ್ಲಿದ್ದ ಚಾಲಕ ಸೇರಿ ಮೂವರು ಪುರುಷರು, ಮೂವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ఒట్టు ఎంటు ಜನರಿಗೆ ಗಾಯವಾಗಿದೆ.

- Advertisement -

Related news

error: Content is protected !!