Friday, March 29, 2024
spot_imgspot_img
spot_imgspot_img

ಪುತ್ತೂರು: ಕೇರಳಕ್ಕೆ ಅಕ್ರಮ ಶ್ರೀಗಂಧದ ಎಣ್ಣೆ ಸಾಗಾಟ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -G L Acharya panikkar
- Advertisement -
vtv vitla

ಪುತ್ತೂರಿನಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸುಮಾರು 2 ಲೀಟರ್ ಶ್ರೀಗಂಧದ ಎಣ್ಣೆಯನ್ನು ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಪಡೆದು ಬಿಡುಗಡೆಗೊಂಡ ವ್ಯಕ್ತಿ ಮತ್ತೆ ಜೈಲು ಸೇರಿದ್ದಾನೆ.

ನ್ಯಾಯಾಲಯದ ಯಾವುದೇ ವಿಚಾರಣೆಗೆ ಹಾಜರಾಗದೇ ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡಿದ್ದು ವ್ಯಕ್ತಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಕಾಸರಗೋಡು ಕೊಲ್ಲಂಬಾಡಿಯ ತಾಯಲ್ ಮನೆ ನಿವಾಸಿ ಮಹಮ್ಮದ್ ರಫೀಕ್ ಎನ್ನಲಾಗಿದೆ.

2006ರಲ್ಲಿ ನಾಲ್ವರು ಆರೋಪಿಗಳು ಕಾರೊಂದರಲ್ಲಿ 2ಲೀಟರ್ ಶ್ರೀ ಗಂಧದ ಎಣ್ಣೆಯನ್ನು ಕೇರಳ ರಾಜ್ಯಕ್ಕೆ ಅಕ್ರಮವಾ ಸಾಗಾಟ ಮಾಡುತ್ತಿದ್ದ ವೇಳೆ ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

ಈತನ ಪತ್ತೆ ಬಗ್ಗೆ ಡಾ| ಗಾನಾ ಪಿ. ಕುಮಾರ್, ಪೊಲೀಸ್ ಉಪಾಧೀಕ್ಷಕರು ಪುತ್ತೂರು ಉಪ ವಿಭಾಗರವರು ಹಾಗೂ ಉಮೇಶ್ ಉಪ್ಪಳಿಕೆ, ವೃತ್ತ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ರವರ ಮಾರ್ಗದರ್ಶನದಂತೆ ಠಾಣಾ ಉಪನಿರೀಕ್ಷಕರುಗಳಾದ ಉದಯರವಿ. ಎಂ.ವೈ, ಮತ್ತು ಅಮೀನಸಾಬ ಎಮ್ ಅತ್ತಾರ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ ಅದ್ರಾಮ್, ಮತ್ತು ಪ್ರವೀಣ್,ರೈ ರವರು ಆರೋಪಿ ಮಹಮ್ಮದ್ ರಫೀಕ್ ಎಂಬಾತನನ್ನು ಕೇರಳ ರಾಜ್ಯದ ಕಣ್ಣೂರು ಎಂಬಲ್ಲಿ ಪತ್ತೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

vtv vitla
- Advertisement -

Related news

error: Content is protected !!