Saturday, June 6, 2026
spot_imgspot_img
spot_imgspot_img

ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಪಲ್ಲತಾರುವಿನಲ್ಲಿ ಮನೆಗೆ ಸಿಡಿಲು ಬಡಿದು ಅಪಾರ ಹಾನಿ

- Advertisement -
- Advertisement -

ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಪಲ್ಲತಾರು ಕಮಲ ಪೂಜಾರಿಯವರ ಮನೆಗೆ ಅ.30ರ ಸಂಜೆ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ. ಕಮಲ ಪೂಜಾರಿ ಮತ್ತು ಅವರ ಮಕ್ಕಳು ಮನೆಯೊಳಗೆ ಇದ್ದ ವೇಳೆ ಈ ಘಟನೆ ನಡೆದಿದೆ.

ಸಿಡಿಲಿನ ಬಡಿತಕ್ಕೆ ಮನೆ ಛಾವಣಿಗೆ ಹಾನಿಯಾಗಿ, ಗೋಡೆ ಬಿರುಕು ಬಿಟ್ಟಿದೆ. ವಿದ್ಯುತ್ ವಯರ್ ಸಂಪೂರ್ಣ ಸುಟ್ಟು ಹೋಗಿದ್ದು. ಸಿಡಿಲಿನ ಅಘಾತಕ್ಕೆ ಮನೆ ಮಂದಿ ಸ್ವಲ್ಪ ಹೊತ್ತು ಅಸ್ವಸ್ಥ ಗೊಂಡಿದ್ದು ಬಳಿಕ ಚೇತರಿಕೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ತಿಳಿದ ಕೊಡಿಪಾಡಿ ಗ್ರಾ.ಪಂ ಪಿಡಿಒ ಶರೀಫ್ ಮತ್ತು ಕೊಡಿಪಾಡಿ ವಿಲೇಜೆ ಅಕೌಂಟ್ ಜಿತೇಶ್, ಕುಡಿಪ್ಪಾಡಿ ಗ್ರಾ.ಪಂ ಅಧ್ಯಕ್ಷೆ ರೇಖಾ ಮತ್ತು ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ, ಕೊಡಿಪ್ಪಾಡಿ ಪಂಚಾಯತಿ ಸದಸ್ಯರಾದ, ಗಿರೀಶ್ ನಂದನ, ಚಂದ್ರಾವತಿ ಪಲ್ಲತಾರು, ಮತ್ತು ಸ್ಮಿತಾ ಹನಿಯೂರು ನವೀನ ಪೂಜಾರಿ ಅರ್ಕ ಕೊಡಿಪಾಡಿ ಪಂಚಾಯಿತಿನ ಸಿಬ್ಬಂದಿ ಪ್ರಶಾಂತ್ ಮತ್ತು ಗ್ರಾಮೀಣ ಭಾಗದ ಮೆಸ್ಕಾಂ ಜ್ಯೂನಿಯರ್ ಇಂಜಿನಿಯರ್ ವೀರ ನಾಯಕ್ ಅವರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!