Tuesday, June 16, 2026
spot_imgspot_img
spot_imgspot_img

ಬದಿಯಡ್ಕ ನಿವಾಸಿ ಬೆಂಗಳೂರು ಅಪಘಾತದಲ್ಲಿ ಮೃತ್ಯು!!

- Advertisement -
- Advertisement -

ಬದಿಯಡ್ಕ: ಡಿಸೆಂಬರ್ 23ರಂದು ವಿವಾಹ ನಿಗದಿಯಾಗಿದ್ದ ಬದಿಯಡ್ಕ ನಿವಾಸಿಯೋರ್ವರು ಬೆಂಗಳೂರಿನಲ್ಲಿ ಅಪಘಾತ ಸಂಭವಿಸಿ ಮೃತಪಟ್ಟ ಘಟನೆ ನಡೆದಿದೆ.

ಬದಿಯಡ್ಕ ಕರಿಂಬಿಲ ನಿವಾಸಿ ಪ್ರವೀಣ್ ಕುಮಾರ್ ಪ್ರಭು (29) ಮೃತ ದುರ್ದೈವಿ. ಪ್ರವೀಣ್ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಇಲೆಕ್ಟ್ರಿಕಲ್ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು ಎಂದು ತಿಳಿದು ಬಂದಿದೆ.

ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾದಗೇ ಪ್ರವೀಣ್ ಮಂಗಳವಾರ ಮೃತಪಟ್ಟಿದ್ದಾರೆ. ಆತನ ಮನೆಯಲ್ಲಿ ಮದುವೆಗಾಗಿ ಎಲ್ಲ ಸಂಭ್ರಮ ಸಡಗರ ತಯಾರಿ ನಡೆಯುತ್ತಿತ್ತು. ಆದರೆ ವಿಧಿ ಆತನ ಸಾವಿಗಾಗಿ ಹೊಂಚುಹಾಕಿ ಕೂತಿತ್ತು ಅನ್ನಿಸುತ್ತಿದೆ.

- Advertisement -

Related news

error: Content is protected !!