Sunday, May 5, 2024
spot_imgspot_img
spot_imgspot_img

ಪುತ್ತೂರು : ಕೊಳ್ನಾಡು ತಾಳಿತ್ತನೂಜಿಯಲ್ಲಿ ನೂತನ ಬಸ್ಸು ತಂಗುದಾಣ ಉದ್ಘಾಟನೆ

- Advertisement -G L Acharya panikkar
- Advertisement -

ಪುತ್ತೂರು : ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿತ್ತನೂಜಿ ನಾರ್ಶ ವಾರ್ಡಿನ ದೇವಸ್ಯ ಜಂಕ್ಷನ್ ಎಂಬಲ್ಲಿ‌ ದಿ! ಮಹಾಲಿಂಗ ಶೆಟ್ಟಿ ದೇವಸ್ಯ ಹಾಗೂ ಗೌರಮ್ಮ ದಾಮೋದರ ಚೌಟ ಸ್ಮರಣಾರ್ಥ ಅವರ ಕುಟುಂಬದವರು ಸಾರ್ವಜನಿಕ ಅನೂಕೂಲಕ್ಕಾಗಿ ದೇವಸ್ಯ ಗೌರಮ್ಮ ದಾಮೋದರ ಚೌಟರ ಮಕ್ಕಳು ಕೊಡುಗೆಯಾಗಿ ನೀಡಿದ ನೂತನ ಪ್ರಯಾಣಿಕರ ಬಸ್ಸು ತಂಗುದಾಣ ಉದ್ಘಾಟನೆ ನಡೆಯಿತು.

ಪುತ್ತೂರು ಡಿಪೋದಿಂದ ಮದಕದವರೆಗೆ ಇದ್ದ ಬಸ್ಸು ಸಂಚಾರ ವ್ಯವಸ್ಥೆಯನ್ನು ತಾಳಿತ್ತನೂಜಿ ದೇವಸ್ಯ ಜಂಕ್ಷನ್ ವರೆಗೆ ವಿಸ್ತರಿಸಲು ಕೊಳ್ನಾಡು ಗ್ರಾಮ ಪಂಚಾಯತ್ 2017 ಅವಧಿಯಲ್ಲಿ ನಿರ್ಣಯಿಸಿತ್ತು. ಆದರೆ ಕೊರೋನ ಸಂದರ್ಭದ ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ ನೆನೆಗುದಿಗೆ ಬಿದ್ದಿತ್ತು. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಹಸೈನಾರ್ ತಾಳಿತ್ತನೂಜಿ ಅವರು ಪುತ್ತೂರು D.T.O ಅವರೊಂದಿಗೆ ನಿರಂತರವಾಗಿ ಸಂಪರ್ಕಿಸಿ ತಾಳಿತ್ತನೂಜಿ ದೇವಸ್ಯ ಜಂಕ್ಷನ್ ವರೆಗೆ ವಿಸ್ತರಿಸಲು ಸಹಕರಿಯಾಗಿದ್ದರು. ಈಗ ದಿನನಿತ್ಯ ಸಾರ್ವಜನಿಕರು, ಶಾಲಾ ಮಕ್ಕಳು ಅದರ ಪ್ರಯೋಜನ ಪಡೆಯುಂತಾಗಿದೆ. ಬಸ್ಸು ವ್ಯವಸ್ಥೆಯಾಗಿದ್ದರೂ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಕುಳಿತುಕೊಳ್ಳಲು ಸರಿಯಾದ ತಂಗುದಾಣವಿಲ್ಲದರ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರೂ, ಪಂಚಾಯತ್ ಉಪಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರಿಗೆ ತಿಳಿಸಿದಾಗ ರೋಟರಿ ಕ್ಲಬ್ ಹಾಗೂ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ನಿರ್ಮಿಸುವುದಾಗಿ ತೀರ್ಮಾನಿಸಲಾಗಿತ್ತು. ಆದರೆ ಗೌರಮ್ಮ-ದಾಮೋದರ ಚೌಟ ಅವರ ಕಿರಿಯ ಮಗ ಚಿದಾನಂದ ಚೌಟರ ಅಭಿಲಾಷೆಯಂತೆ ಅವರ ಉಸ್ತುವಾರಿಯೊಂದಿಗೆ ಬಸ್ಸು ತಂಗುದಾಣದ ಸಂಪೂರ್ಣ ವೆಚ್ಚ ಭರಿಸಿ ಸುಸಜ್ಜಿತ ತಂಗುದಾಣ ನಿರ್ಮಿಸಿ ಸಾರ್ವಜನಿಕರಿಗೆ ಬಿಟ್ಟುಕೊಡಲಾಯಿತು.

ದಿವಂಗತ ದೇವಸ್ಯ ಮಹಾಲಿಂಗ ಶೆಟ್ಟಿ ಈ ಊರಿನ ಹಳೆಯ ಸ್ಥಿತಿವಂತ, ಜಮೀನ್ದಾರಿ ಕುಟುಂಬ ನೂರಾರು ಎಕರೆ ಭೂಮಿ ಹೊಂದಿದ ಕುಟುಂಬ, ಉಳುವವನೇ ಒಡೆಯ ಕಾನೂನಿನಲ್ಲಿ ಭೂಮಿಯನ್ನು ತನ್ನ ಒಕ್ಕಲುತನ ಕುಟುಂಬಗಳಿಗೆ ಯಾವುದೇ ಪ್ರಭಾವ ಬೀರದೆ ಮುಕ್ತ ಮನಸ್ಸಿನಿಂದ ಬಿಟ್ಟುಕೊಟ್ಟು ಅವರನ್ನು ಕೂಡ ತಮ್ಮದೇ ಕುಟುಂಬ ಎಂಬಂತೆ ನೋಡಿಕೊಂಡ ದೀಮಂತ ವ್ಯಕ್ತಿತ್ವ. ಕಷ್ಟ ಕಾರ್ಪಾಣ್ಯಗಳೊಂದಿಗೆ ಯಾರೇ ಮನೆಗೆ ಬಂದರು ಜಾತಿಮತ ನೋಡದೆ ಸ್ಪಂದಿಸುತ್ತಿದ್ದ ಕುಟುಂಬವದು. ಊರಿನಲ್ಲಿ ಯಾವುದೇ ತಕರಾರುಗಳು, ಭಿನ್ನಮತಗಳು ಇದ್ದರೆ ಇವರ ಮನೆಯೇ ನ್ಯಾಯಾಲಯ. ಅವರು ನೀಡಿದ ತೀರ್ಪು ಜನರು ಒಪ್ಪುವಂತಿತ್ತು. ಬಾರೆಬೆಟ್ಟು ಜುಮಾ ಮಸೀದಿ ನಿರ್ಮಿಸುವ ಆ ಸಂಧರ್ಭದಲ್ಲಿ ಅವರು ಕೂಡ ಮುತುವರ್ಜಿವಹಿಸಿರುವುದು ಕೋಮು ಸೌಹಾರ್ದತೆಗೆ ಸಾಕ್ಷಿ. ಅವರ ಕಾಲನಂತರದ ದಿನಗಳಲ್ಲಿ ಅವರ ಮಗಳು ಗೌರಮ್ಮ ಉತ್ತರಾಧಿಕಾರಿ ರೀತಿಯಲ್ಲಿ ತಂದೆಯ ಕಾರ್ಯಗಳನ್ನು ಮುಂದುವರಿಸಿದ ಆ ಮಹಾತಾಯಿಯ ಬಗ್ಗೆ ಇಂದಿಗೂ ಕಂಬನಿ ಮಿಡಿಯುವ ಕುಟುಂಬಗಳಿವೆ ಇದು ಮಹಾಲಿಂಗ ಶೆಟ್ಟಿಯವರ ಮನೆತನಕ್ಕೆ ಸಂಧ ಗೌರವವಾಗಿದೆ.

ಅದೇ ಸಂಸ್ಕೃತಿಯನ್ನು ಮುಂದುವರಿಸಿದ ಮೊಮ್ಮಕ್ಕಳಲ್ಲಿ ಪ್ರಮುಖರಾದವರು ದೇವಸ್ಯ ಗಂಗಾಧರ ಚೌಟ ಸಮಾಜ ಸೇವೆಯಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡು ಕೊಳ್ನಾಡು ಗ್ರಾಮ ಪಂಚಾಯತಿಗೆ ನಾಲ್ಕು ಬಾರಿ ಆಯ್ಕೆಗೊಂಡು ಊರಿನ ಅಭಿವೃದ್ಧಿಯ ಪಾಲುದಾರರಾಗಿದ್ದರು. ಕುಗ್ರಾಮವಾಗಿದ್ದ ತಾಳಿತ್ತನೂಜಿಗೆ ಸಂಪರ್ಕಿಸುವ ಮುಖ್ಯರಸ್ತೆಗಳಿಗೆ ಸುಮಾರು ಒಂದು ಎಕರೆಯಷ್ಟು ಭೂಮಿಯನ್ನು ದಾನವಾಗಿ ನೀಡಿ ಮೂಲಸೌಕರ್ಯಗಳಿಗೆ ಒತ್ತು ನೀಡಿದವರಲ್ಲಿ ಮೊದಲಿಗರು. ಕೊರೋನ ಸಂದರ್ಭದಲ್ಲಿ ಮದುವೆಗಳಿಗೆ ಸರಕಾರ ಹೊರಡಿಸಿದ ನಿಯಮಗಳಿಂದಾಗಿ ಅವರ ಮಗಳ ಮದುವೆಯನ್ನು ಸರಳವಾಗಿ ಆಚರಿಸಿ, ಬದಲಿಗೆ ನೂರಾರು ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದ ಗಂಗಾಧರ ಚೌಟರು ಯಾವುದೇ ಪ್ರಚಾರ ಬಯಸದ ಪ್ರಮಾಣಿಕ ಜನಸೇವಕರಾಗಿ ಜನಾನುರಾಗಿದ್ದಾರೆ.ಕಿರಿಯ ಮಗ ಚಿದಾನಂದ ಚೌಟರ ಮುಂದಾಳುತ್ವದಲ್ಲಿ ನಡೆದ ಬಸ್ಸು ತಂಗುದಾಣ ಉದ್ಘಾಟನೆಯನ್ನು ಅವರ ಕುಟುಂಬದ ಹಿರಿಯ ಸದಸ್ಯ ಚಂದ್ರಶೇಖರ ಚೌಟ ಉದ್ಘಾಟಿಸಿ ಸಾರ್ವಜನಿಕ ಅನುಕೂಲತೆಗೆ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಾತಾಡಿ, ದೇವಸ್ಯ ಮಹಾಲಿಂಗ ಶೆಟ್ಟರ ಕುಟುಂಬದ ಉದಾರತೆಯನ್ನು ಮೆಲುಕು ಹಾಕಿದರು. ಸುಂದರ ಸುಸಜ್ಜಿತ ತಂಗುದಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಸಾರ್ವಜನಿಕರು, ಶಾಲಾ ಮಕ್ಕಳು ಇದನ್ನು ದುರುಪಯೋಗಿಸದೆ ಸ್ವಚ್ಚತೆ ಪಾಲಿಸಬೇಕೆಂದು ಸಲಹೆ ನೀಡಿದರು. ಮತ್ತು ಕುಟುಂದವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ತಾಳಿತ್ತನೂಜಿಯ ಮೂಲಸೌಕರ್ಯಗಳಿಗೆ ಸ್ಪಂದಿಸಿ ಬಸ್ಸು ತಂಗುದಾಣದ ಸಮೀಪಕ್ಕೆ ಒಂದು ಲಕ್ಷ ರುಪಾಯಿ ವೆಚ್ಚದ ಹೈಮಾಸ್ಕ್ ಸೋಲಾರ್ ದೀಪ ಆಳವಡಿಸಲು ಪ್ರಮುಖ ಪಾತ್ರವಹಿಸಿದ ಅಭಿವೃದ್ಧಿಯ ರುವಾರಿ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ದೇವಸ್ಯ ಕುಲ್ಯಾರು ಭಾಗದಲ್ಲಿ ಕಾಂಕ್ರೀಟ್ ರಸ್ತೆ, ಕುಲ್ಯಾರು ಅಕ್ಕರೆ ಸಂಪರ್ಕಿಸುವ ಸೇತುವೆ ನಿರ್ಮಿಸಲು ಸಹಕರಿಸಿದ ನಾರಯಣ ಶೆಟ್ಟಿ ಕುಲ್ಯಾರು, ತಾಳಿತ್ತನೂಜಿ ದೇವಸ್ಯವರೆಗಿನ ಬಸ್ಸು ವ್ಯವಸ್ಥೆ ಕಲ್ಪಿಸಲು ಸಹಕರಿಸಿದ ಹಸೈನಾರ್ ತಾಳಿತ್ತನೂಜಿ ಇವರನ್ನು ಸಾರ್ವಜನಿಕರ ಸಮ್ಮುಖದಲ್ಲಿ ದಿ.ಮಹಾಲಿಂಗ ಶೆಟ್ಟಿ ಹಾಗೂ ಗೌರಮ್ಮ ದಾಮೋದರ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನಾರಯಣ ಶೆಟ್ಟಿ ಕುಲ್ಯಾರು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಂಕಪ್ಪ ಗೌಡ ತಾಳಿತ್ತನೂಜಿ, ಸೋಮಶೇಖರ್ ಗೌಡ ತಾಳಿತ್ತನೂಜಿ, ವನಬಿಂದು ದೇವಸ್ಥಾನ ಕಾರ್ಯದರ್ಶಿ ಈಶ್ವರ ಗೌಡ ತಾಳಿತ್ತನೂಜಿ, ಜಯನಾಥ ಮೂಲ್ಯ ತಾಳಿತ್ತನೂಜಿ ಕೋಡಿ, ಮೊಯಿದುಕುಂಞ ತಾಳಿತ್ತನೂಜಿ, ಅಬ್ದುಲ್ ರಹಿಮಾನ್ ಕುಲ್ಯಾರು, ಊರಿನ ನಾಗರೀಕರು ಹಾಗೂ ದಿ.ಮಹಾಲಿಂಗ ಶೆಟ್ಟಿ ಕುಟುಂಸ್ಥರು ಹಾಜರಿದ್ದರು. ಕುಟುಂಬದ ಪರವಾಗಿ ಹಸೈನಾರ್ ತಾಳಿತ್ತನೂಜಿ ಸ್ವಾಗತಿಸಿ, ಸೋಮಶೇಖರ್ ಗೌಡ ವಂದಿಸಿದರು.

- Advertisement -

Related news

error: Content is protected !!