Thursday, April 25, 2024
spot_imgspot_img
spot_imgspot_img

ಪುತ್ತೂರು: ಗೆಜ್ಜೆಗಿರಿ ಆಡಳಿತವನ್ನು ಸಂಪೂರ್ಣ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಕ್ಷೇತ್ರಾಡಳಿತ ಸಮಿತಿ

- Advertisement -G L Acharya panikkar
- Advertisement -

ಪುತ್ತೂರು: ರಾಜ್ಯದ ಗಮನ ಸೆಳೆದಿರುವ ಕೋಟಿ-ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲಿನ ಆಡಳಿತ ಹಕ್ಕಿನ ವಿವಾದ ಈಗ ಇನ್ನೊಂದು ಮಜಲನ್ನು ತಲುಪಿದೆ.

ಪುತ್ತೂರು ನ್ಯಾಯಾಲಯ ದಲ್ಲಿ ಶ್ರೀಧರ ಪೂಜಾರಿಯವರು ಸಲ್ಲಿಸಿದ್ದ ದೂರು ವಿಚಾರಣೆಗೆ ಬಂದಿತ್ತು. ಆದರೆ ಘನ ನ್ಯಾಯಾಲಯ ಆಡಳಿತ ಸಮಿತಿಯ ಆಡಳಿತಕ್ಕೆ ತಡೆಯಾಜ್ಞೆ ನೀಡದೆ ಫೆಬ್ರವರಿ 16ರಂದು ಲಿಖಿತ ಹೇಳಿಕೆ ದಾಖಲಿಸುವಂತೆ ಸಮಿತಿ ಗೆ ಸೂಚಿಸಿದೆ.

ಈ ಮೂಲಕ ಆಡಳಿತ ಸಮಿತಿಗೆ ತಡೆಯಾಜ್ಞೆ ಇಲ್ಲದ ಕಾರಣ ತನ್ನ ಪ್ರಥಮ ಹೆಜ್ಜೆಯಾಗಿ ಕ್ಷೇತ್ರದ ತಂತ್ರಿಯಾಗಿದ್ದ ಲೋಕೇಶ್ ತಂತ್ರಿಯನ್ನು ಬದಲಾವಣೆ ಮಾಡಿ ಅವರ ಸ್ಥಾನದಲ್ಲಿ ಶಿವಾನಂದ ತಂತ್ರಿಯನ್ನು ತ೦ತ್ರಿಯನ್ನಾಗಿ ಆಡಳಿತ ಸಮಿತಿ ನೇಮಿಸಿದೆ. ಈ ಮೂಲಕ ಗೆಜ್ಜೆಗಿರಿ ಆಡಳಿತದ ಸಂಪೂರ್ಣ ನಿಯಂತ್ರಣವನ್ನು ಆಡಳಿತ ಮಂಡಳಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಬ್ರಹ್ಮಕಲಶೋತ್ಸವ ಮತ್ತು ನಂತರದ ದಿನಗಳಲ್ಲಿ ಕ್ಷೇತ್ರ ಆಡಳಿತ ಸಮಿತಿ ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡಿರಲಿಲ್ಲ. ಆದರೆ ಡಿಸೆಂಬರ್ ತಿಂಗಳಿನಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಕಾನೂನು ತಜ್ಞರ ಸಲಹೆಯ ಮೇರೆಗೆ ಕ್ಷೇತ್ರ ಆಡಳಿತ ಸಮಿತಿ ಆಡಳಿತಕ್ಕೆ ಕೈಹಾಕಿತು ಎನ್ನುತ್ತಾರೆ ಭಕ್ತರು.

ನಂತರದ ಬೆಳವಣಿಗೆಯಲ್ಲಿ ಜಾಗದ ಮಾಲೀಕತ್ವ ಹೊಂದಿರುವ ಶ್ರೀಧರ ಪೂಜಾರಿ ಪುತ್ತೂರಿನ ನ್ಯಾಯಾಲದಲ್ಲಿ ದಾವೆಯನ್ನು ಹೂಡಿದ್ದು ಆಡಳಿತ ಮಂಡಳಿ ಆಡಳಿತಕ್ಕೆ ತಡೆಯಾಜ್ಞೆ ಕೋರಿದ್ದರು. ಇದು ಆಡಳಿತದ ವಿಷಯದಲ್ಲಿ ಗೊಂದಲ ಹಾಗೂ ಕುತೂಹಲವನ್ನು ಸಾರ್ವಜನಿಕರ ಹಾಗೂ ಭಕ್ತರ ನಡುವೆ ಉಂಟುಮಾಡಿತ್ತು.

ಕಳೆದ 10 ತಿಂಗಳಿಂದ ಹುಂಡಿಯ ಹಣವನ್ನು ತೆಗೆಯಲು ಆಡಳಿತ ಮಂಡಳಿಗೆ ಸಾಧ್ಯವಾಗಿರಲಿಲ್ಲ, ಆದರೆ ಕಾನೂನು ತಜ್ಞರ ಸಲಹೆ ಮೇರೆಗೆ ಸಂಪೂರ್ಣ ಆಡಳಿತವನ್ನು ಕ್ಷೇತ್ರ ಆಡಳಿತ ಸಮಿತಿ ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನ ಪಟ್ಟಾಗ ವಿವಾದ ತಾರಕಕ್ಕೇರಿತ್ತು. ಇದು ಫೆಬ್ರವರಿ 26ರಂದು ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಮೇಲೆ ಆತಂಕವನ್ನು ಭಕ್ತರಲ್ಲಿ ಸೃಷ್ಟಿ ಮಾಡಿತ್ತು. ಈ ನಡುವೆ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಬೇಕೆಂದು ಭಕ್ತರು ಮನವಿ ಮಾಡುತ್ತಿದ್ದಾರೆ.

ಗೆಜ್ಜೆಗಿರಿ ಒಂದು ಹಂತಕ್ಕೆ ಪರಿಹಾರ ಯಾಗುವಂತೆ ಕಂಡುಬರುತ್ತಿದೆ. ಆದರೆ ಗೆಜ್ಜೆಗಿರಿಯಲ್ಲಿ ಹುಟ್ಟಿಕೊಂಡಿರುವ ವಿವಾದ ಮುಂದೆ ಅದ್ಯಾವ ತಿರುವ ಪಡೆಯುತ್ತದೆಯೋ ಅನ್ನೋದನ್ನು ಕಾದುನೋಡಬೇಕಾಗಿದೆ.

- Advertisement -

Related news

error: Content is protected !!