Wednesday, June 17, 2026
spot_imgspot_img
spot_imgspot_img

ಪುತ್ತೂರು: ಗೆಳತಿಯನ್ನು ಭೇಟಿ ಮಾಡಲು ಬಂದ ಯುವಕ; ಹೆತ್ತವರ ಕಣ್ಣಿಗೆ ಬಿದ್ದು ಅವಾಂತರ…

- Advertisement -
- Advertisement -

ಪುತ್ತೂರು: ಯುವಕನೋರ್ವ ತನ್ನ ಗೆಳತಿಯನ್ನು ಭೇಟಿ ಮಾಡಲು ಬಂದ ವೇಳೆ ವಿದ್ಯಾರ್ಥಿನಿಯ ಹೆತ್ತವರು ಆಗಮಿಸಿ ಕೆಲವು ಕಾಲ ಗೊಂದಲ ಸೃಷ್ಠಿಯಾಗಿ, ಪ್ರಕರಣ ಪೊಲೀಸ್‌ ಠಾಣಾ ಮೆಟ್ಟಿಲೇರಿದ ಘಟನೆ ಪುತ್ತೂರಿನ ಮುಕ್ವೆ ಸಮೀಪ ನಡೆದಿದೆ.

ಗೆಜ್ಜೆಗಿರಿ ಸಮೀಪದ ನಿವಾಸಿಯಾಗಿರುವ ಕಾಲೇಜು ವಿದ್ಯಾರ್ಥಿಯೋರ್ವ ತನ್ನ ಸಹಪಾಠಿ ಸ್ನೇಹಿತೆಯನ್ನು ಭೇಟಿಯಾಗಲೆಂದು ಮುಕ್ವೆಗೆ ಬಂದಿದ್ದರು. ಆದರೆ ವಿದ್ಯಾರ್ಥಿನಿಯ ಮನೆಯವರಿಗೆ ಗೊಂದಲ ಉಂಟಾಗಿ ವಿದ್ಯಾರ್ಥಿಯ ವಿರುದ್ಧ ಹೆತ್ತವರು ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ವಿದ್ಯಾರ್ಥಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!