Monday, May 6, 2024
spot_imgspot_img
spot_imgspot_img

ಪುತ್ತೂರು: ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಪ್ರಜ್ಞಾ ಆಶ್ರಮದಲ್ಲಿ ದೀಪಾವಳಿ ಆಚರಣೆ

- Advertisement -G L Acharya panikkar
- Advertisement -

ಪುತ್ತೂರು : ದೀಪಾವಳಿ ಬೆಳಕಿನ ಹಬ್ಬ ಇದು ನಮ್ಮ ಬಾಳನ್ನಷ್ಟೇ ಅಲ್ಲ ಇತರರ ಬಾಳಿಗೂ ಬೆಳಕನ್ನು ನೀಡಬೇಕು ಹೀಗಾಗಿ ಪ್ರಪಂಚದ ಅರಿವೇ ಇಲ್ಲದಿರುವ ಮಾನಸಿಕ ವಿಕಲಚೇತನರು ದೀಪಾವಳಿ ಆಚರಣೆ ಮಾಡಬೇಕು ಎನ್ನುವ ಉದ್ದೇಶದಿಂದ ಪುತ್ತೂರಿನ ಬೀರಮಲೆಗುಡ್ಡೆಯಲ್ಲಿ ಇರುವ ಪ್ರಜ್ಞಾ ಆಶ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದರು. ಪ್ರಜ್ಞಾ ಆಶ್ರಮ ವಿಕಲಚೇತನರ ತರಬೇತಿ ಮತ್ತು ಪುನರ್ವಸತಿ ಕೇಂದ್ರದಲ್ಲಿ ಇರುವ ಮಾನಸಿಕ ವಿಕಲಚೇತನರಿಗೆ ಸಿಹಿ ವಿತರಿಸಿ, ದೀಪಾವಳಿ ಹಬ್ಬವನ್ನು ಆಚರಿಸಿ ಶುಭ ಹಾರೈಸಿದರು.

ಪ್ರಪಂಚದ ಅರಿವೇ ಇಲ್ಲದೇ ಇರುವ ಇವರ ಚಟುವಟಿಕೆಗಳು ಪ್ರತಿಯೊಬ್ಬರನ್ನೂ ಒಂದು ಕ್ಷಣ ಮೌನವಾಗಿಸಿತ್ತದೆ. ಇತಂಹ ಮಕ್ಕಳು ಹುಟ್ಟುವುದು ಸಹಜ ಆದರೆ ತಂದೆ ತಾಯಿಗೆ ಇದು ಭಾರವೆನಿಸುತ್ತದೆ ಅಥವಾ ಮನೆಯಲ್ಲಿನ ಅರ್ಥಿಕ ಸಮಸ್ಯೆಯಿಂದಾಗಿ ಇ0ತಹ ಕೇಂದ್ರದಲ್ಲಿ ಬಿಟ್ಟು ಹೋಗುತ್ತಾರೆ. ಇಲ್ಲಿಗೆ ಬಂದ ಮಾನಸಿಕ ವಿಕಲಚೇತನರನ್ನು ಅವರಿಗೆ ಮನೆಯ ನೆನಪು ಬರದಂತೆ, ಒಳ್ಳೆಯ ಸೌಲಭ್ಯ ಒದಗಿಸಿ ಅತ್ಯಂತ ಜಾಗ್ರತೆಯಿಂದ ನೋಡಿಕೊಳ್ಳುವುದು ಸವಾಲೇ ಸರಿ, ಆದರೆ ಅಣ್ಣಪ್ಪ ಮತ್ತು ಅವರ ಪತ್ನಿ ಜ್ಯೋತಿ ಇವರನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೋಳ್ಳತ್ತಿದ್ದಾರೆ.

ಅದೆಷ್ಟೋ ಪೋಷಕರು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುವ, ತಿಳುವಳಿಕೆಯಿರುವ ಮಕ್ಕಳನ್ನೇ ಸಾಕಲು ಹೆಣಗಾಡುತ್ತಾರೆ. ಅಂತಹುದರಲ್ಲಿ ಇವರು ಮಾನಸಿಕ ವಿಕಲಚೇತನರನ್ನು ತಮ್ಮ ಮಕ್ಕಳಂತೆ ಸಲಹುತ್ತಾ, ತರಬೇತಿಗಳನ್ನು ನೀಡುತ್ತ ಯಾವುದರಲ್ಲೂ ಕುಂದು ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಅವರುಗಳಿಗೆ ಆಸಕ್ತಿ ಹಾಗೂ ಸಾಮರ್ಥ್ಯಕ್ಕನುಗುಣವಾಗಿ ವಿವಿಧ ಚಟುವಟಿಕೆ, ಆಹಾರ, ಹವ್ಯಾಸಗಳೊಂದಿಗೆ ಜೀವನ ನಿರ್ವಹಣೆ ನಡೆಸಲು ಸಂಸ್ಥೆ ಶ್ರಮಿಸುತ್ತಾ ಇದೆ.

ಕೆಲವು ಸಂಘ ಸಂಸ್ಥೆಗಳು ಮಕ್ಕಳಿಗೆ ಅನುಕೂಲವಾಗುವಂತೆ ವಸ್ತುಗಳು, ಬಟ್ಟೆಗಳು ಹಾಗೂ ಗೌರವಧನ ನೀಡುವುದು ಇವರಿಗೆ ಸಹಕಾರವಾಗಿದೆ. ಪಟ್ಟಣ ಪ್ರದೇಶದಿಂದ ದೂರವಿದ್ದುದರಿಂದ ಈ ಕೇಂದ್ರವನ್ನು ನಡೆಸಲು ಸ್ವಲ್ಪ ಕಷ್ಟವಾಗಿದೆ, ಯಾಕೆಂದರೆ ಇವರಿಗೆ ಆರೋಗ್ಯದಲ್ಲಿ ಸಮಸ್ಯೆಯಾದರೆ ಹೇಳಿಕೊಳ್ಳಲು ಗೊತ್ತಿಲ್ಲ ಹಾಗಾಗಿ ರಾತ್ರಿ ಹೊತ್ತಲ್ಲಿ ಇವರಿಗೆ ಆರೋಗ್ಯ ಸಮಸ್ಯೆಯಾದರೆ ವಾಹನದ ವ್ಯವಸ್ಥೆಯಿಲ್ಲದೆ ಇರುವುದರಿಂದ ಆಸ್ಪತ್ರೆಗೆ ಕರೆತರಲು ಕಷ್ಟವಾಗುತ್ತದೆ ಎಂದು ಪ್ರಜ್ಞಾ ಕೇಂದ್ರದ ಅಣ್ಣಪ್ಪ ತಿಳಿಸಿದರು.

ಜಯಕರ್ನಾಟಕ ಜನಪರ ವೇದಿಕೆ ಪ್ರಜ್ಞಾ ಕೇಂದ್ರಕ್ಕೆ ತೆರಳಿ ಅವರಿಗೂ ದೀಪಾವಳಿ ಆಚರಣೆ ಮಾಡುವಂತೆ ಪ್ರೋತ್ಸಹ ನೀಡಿದರು. ಜಯಕರ್ನಾಟಕ ಜನಪರ ವೇದಿಕೆಯ ದಕ್ಷಿಣ ಕನ್ನಡ ಕಾರ್ಯಕಾರಣಿ ಸದಸ್ಯರಾದ ಸಂತೋಷ್ ಕುಮಾರ್.ರೈ ಕೈಕಾರ ಹಾಗೂ ಅಕ್ಷಯ್.ರೈ ದಂಬೆಕಾನ ದೀಪ ಬೆಳಗಿಸಿ ಮಾನಸಿಕ ವಿಕಲಚೇತನರಿಗೆ ಸಿಹಿತಿಂಡಿ ಹಂಚಿದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ರಾಮ್‌ದಾಸ್.ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ವೇಳೆ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಪ್ರವೀಣ್.ಶೆಟ್ಟಿ ತಿಂಗಳಾಡಿ, ಜಯಂತ್.ಕು0ಬ್ರ, ಸಾತ್ವಿಕ್ ಪಕ್ಕಳ, ಸೋಮು ಮುಂಡೂರು, ಪ್ರಜ್ವತ್ ರೈ, ಜಯಂತ ಕುಂಬ್ರ ಹಾಗೂ ಕಮಲ್.ಕುಲಾಲ್ ಪುತ್ತೂರು ಉಪಸ್ಥಿತರಿದ್ದರು

- Advertisement -

Related news

error: Content is protected !!