Friday, April 26, 2024
spot_imgspot_img
spot_imgspot_img

ಪುತ್ತೂರು: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

- Advertisement -G L Acharya panikkar
- Advertisement -

ಪುತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪುತ್ತೂರಿನ ಖ್ಯಾತ ಚಿನ್ನದ ಮಳಿಗೆಯ ‘ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌’ ನೂತನ ಶೋರೂಂನಲ್ಲಿ ಬೃಹತ್ ತಿರಂಗವನ್ನು ಹಾರಿಸಲಾಗಿದೆ.

ಹರ್ ಘರ್ ತಿರಂಗ ಅಭಿಯಾನದ ಪ್ರಯುಕ್ತ ಮುಖ್ಯರಸ್ತೆಯಲ್ಲಿರುವ ನೂತನ ಶೋರೂಂ ನಲ್ಲಿ 33 ಅಡಿ ಅಗಲದ 22 ಅಡಿ ಎತ್ತರದ ವಿಶಾಲವಾದಂತಹ ತಿರಂಗವನ್ನು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಹಾರಿಸಲಾಗಿದ್ದು, ಈ ತ್ರಿವರ್ಣ ಧ್ವಜ ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ. ಈ ತಿರಂಗವು ಪುತ್ತೂರಿನಲ್ಲಿ ಹಾರಿಸಲ್ಪಟ್ಟ ಅತೀ ದೊಡ್ಡ ತಿರಂಗ ಎನ್ನಲಾಗುತ್ತಿದ್ದು, ಈ ತಿರಂಗದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪುತ್ತೂರಿನ ಆರ್ವಿ ಇಂಟರ್ ಗ್ರಾಫಿಕ್ಸ್ ಈ ಧ್ವಜವನ್ನು ತಯಾರಿಸಿದ್ದಾರೆ.

ಆ.15 ಬೆಳಿಗ್ಗೆ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಧ್ವಜಾರೋಹಣ ನಡೆಯಿತು. ನಿವೃತ್ತ ಸೇನಾ ನಾಯಕ್ ಸುಬೇದಾರ್ ಮೋಹನ್ ಗೌಡ ತೆಂಕಿಲ ಧ್ವಜಾರೋಹಣಗೈದರು. ಬಳಿಕ ಮಾತನಾಡಿದ ಮೋಹನ್ ಗೌಡರು, ಸೇನೆಗೆ ಹೆಚ್ಚು ಯುವಜನತೆ ಸೇರಬೇಕು. ಎಲ್ಲಾ ವಿದ್ಯಾಭ್ಯಾಸ ಹೊಂದಿರುವವರಿಗೂ ಸೇನೆಗೆ ಸೇರಬಹುದು, ಸೇನೆಯಲ್ಲಿ ಉನ್ನತ ಪದವಿಯವರೆಗೆ ಹೋಗುವ ಅವಕಾಶವಿದೆ. ಈಗ ಸೇನೆಯಲ್ಲಿ ಉತ್ತಮ ಸವಲತ್ತುಗಳಿವೆ. ಹೆಚ್ಚು ಹೆಚ್ಚು ಜನ ಸೇನೆಗೆ ಸೇರಿ ದೇಶಸೇವೆ ಮಾಡಿ ಎಂದು ಕರೆ ಕೊಟ್ಟರು.

ಜಿ.ಎಲ್ ಗ್ರೂಪ್ಸ್ ಚೆಯರ್ ಮೆನ್ ಬಲರಾಮ ಆಚಾರ್ಯ, ಪತ್ನಿ ರಾಜಿ ಬಲರಾಮ ಆಚಾರ್ಯ, ಆಡಳಿತ ನಿರ್ದೇಶಕ ಲಕ್ಷ್ಮೀಕಾಂತ್ ಬಿ. ಆಚಾರ್ಯ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

- Advertisement -

Related news

error: Content is protected !!