Tuesday, May 7, 2024
spot_imgspot_img
spot_imgspot_img

ಪುತ್ತೂರು: ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಗೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ GST ಅಧ್ಯಕ್ಷರಿಂದ ‘ಪ್ರಶಂಸಾ ಪತ್ರ’

- Advertisement -G L Acharya panikkar
- Advertisement -

ಪುತ್ತೂರು: ದೇಶದಾದ್ಯಂತ GST ತೆರಿಗೆ ಪದ್ದತಿ ಆರಂಭವಾಗಿ ನಾಲ್ಕು ವರ್ಷ ಪೂರೈಸಿದ್ದು, ಪುತ್ತೂರಿನ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಗೆ, ಅದು ಸರ್ಕಾರಕ್ಕೆ ಸಲ್ಲಿಸಿರುವ ತೆರಿಗೆ ವಾಣಿಜ್ಯಕರ ನಿರ್ವಹಣೆಯಲ್ಲಿ ತೋರಿಸಿರುವ ಗುಣಮಟ್ಟಕ್ಕಾಗಿ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಜಿಎಸ್‌ಟಿ ಅಧ್ಯಕ್ಷರಿಂದ ಪ್ರಶಂಸಾ ಪತ್ರ ಲಭಿಸಿದೆ.

2021-22ರ ಸಾಲಿನಲ್ಲಿ ಸಂಸ್ಥೆಯೂ ಪ್ರಾಮಾಣಿಕವಾಗಿ ಜಿಎಸ್ಟಿ ಪಾವತಿ ಮಾಡಿದ್ದಲ್ಲದೆ, ಸಮಯಕ್ಕೆ ಸರಿಯಾಗಿ ರಿಟರ್ನ್ಗಳನ್ನು ಸಲ್ಲಿಸುವ ಮೂಲಕ ದೇಶದ 1.2 ಕೋಟಿ ಜಿಎಸ್ಟಿ ಪಾವತಿದಾರರ ನಡುವೆ ವಿಶೇಷ ಸ್ಥಾನ ಗಳಿಸಿದೆ.

ಪುತ್ತೂರಿನಲ್ಲಿ ಮುಖ್ಯ ಕಛೇರಿ ಹೊಂದಿರುವ ಈ ಸಂಸ್ಥೆಗೆ ಸತತ 4 ವರ್ಷಗಳಿಂದ ಈ ಪ್ರಮಾಣ ಪತ್ರದ ಸಿಗುತ್ತಿರುವುದು ವಿಶೇಷವಾಗಿದೆ. ಈ ಸಾಧನೆ ಮಾಡಿದ ಜಿಲ್ಲೆಯ ಕೆಲವೇ ಕೆಲವು ಸಂಸ್ಥೆಗಳಲ್ಲಿ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಕೂಡ ಒಂದಾಗಿದೆ.

64 ವರ್ಷಗಳ ಹಿಂದೆ ಜಿ.ಎಲ್ ಆಚಾರ್ಯರವರು ಪುತ್ತೂರಿನಲ್ಲಿ ಪ್ರಾರಂಭಿಸಿದ ಜಿ.ಎಲ್ ಆಚಾರ್ಯ ಸಂಸ್ಥೆ ಇದೀಗ ಪುತ್ತೂರು, ಹಾಸನ , ಕುಶಾಲನಗರ, ಸುಳ್ಯದಲ್ಲಿ ಜ್ಯುವೆಲ್ಲರಿ ಹೊಂದಿದೆ, ಈ ಸಂಸ್ಥೆಯೂ ಜಿ.ಎಲ್ ಪ್ರಾಪರ್ಟಿಸ್ ಎಂಬ ಅಂಗ ಸಂಸ್ಥೆಯನ್ನು ಹೊಂದಿದ್ದು ಅದು ಪುತ್ತೂರಿನಲ್ಲಿ ಜಿಎಲ್ ಟ್ರೇಡ್ ಸೆಂಟರ್, ಜಿ.ಎಲ್ ಕಾಂಪ್ಲೆಕ್ಸ್ ಎಂಬರೆಡು ವಾಣಿಜ್ಯ ಮಳಿಗೆಗಳನ್ನು ಹೊಂದಿದೆ., ಇದೀಗ ಜಿ.ಎಲ್ ಮಾಲ್ ಎಂಬ ಬಹು ಮಹಡಿಯ ಮಾಲ್ ಒಂದು ನಿರ್ಮಾಣ ಹಂತದಲ್ಲಿದ್ದು ಪುತ್ತೂರಿನ ಜನತೆಯ ಬಹುದೊಡ್ಡ ಕನಸ್ಸನ್ನು ಪೂರ್ಣಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದೆ.

2 ದಶಕಗಳ ಹಿಂದೆ ಈ ಸಂಸ್ಥೆಯೂ ನಿರ್ಮಿಸಿದ ಜಿ.ಎಲ್ ಕಾಂಪ್ಲೆಕ್ಸ್ ಪುತ್ತೂರಿನ ಪ್ರಥಮ ಸುಸಜ್ಜಿತ ಲಾಡ್ಜ್ ಆಗಿದ್ದು, ಇದೀಗ ಜಿ.ಎಲ್ ಮಾಲ್ ಕೂಡ ಪುತ್ತೂರಿನ ಪ್ರಥಮ ಮಾಲ್ ಆಗಿರಲಿದೆ , ಈ ಮೂಲಕ ಹಲವು ಪ್ರಥಮಗಳನ್ನು ಪುತ್ತೂರಿಗೆ ನೀಡಿದ ಕೀರ್ತಿ ಜಿ.ಎಲ್ ಆಚಾರ್ಯ ಸಂಸ್ಥೆಗೆ ಸಲ್ಲುತ್ತದೆ.

ಸಂಸ್ಥಾಪಕ ಜಿ ಎಲ್ ಆಚಾರ್ಯರ ಪುತ್ರ ಬಲರಾಮ ಆಚಾರ್ಯ ರವರ ನೇತೃತ್ವದಲ್ಲಿ ಅವರ ಪುತ್ರರಾದ , ಲಕ್ಷ್ಮಿಕಾಂತ್ ಆಚಾರ್ಯ, ಸುದನ್ವ ಆಚಾರ್ಯ ಜಿ.ಎಲ್ ಸಮೂಹ ಸಂಸ್ಥೆಗಳನ್ನು ಮುನ್ನಡೆಸುತಿದ್ದಾರೆ.

- Advertisement -

Related news

error: Content is protected !!