Thursday, June 18, 2026
spot_imgspot_img
spot_imgspot_img

ಪುತ್ತೂರು: ಜ್ಯೋತಿಷಿ ಮನೆಗೆ ನುಗ್ಗಿದ ದರೋಡೆಕೋರರು; ಚಿನ್ನಾಭರಣ ನಗದು ದೋಚಿ ಪರಾರಿ

- Advertisement -
- Advertisement -

ಪುತ್ತೂರು: ರಾತ್ರಿ ವೇಳೆ ಜ್ಯೋತಿಷಿಯೊಬ್ಬರ ಮನೆಗೆ ನುಗ್ಗಿದ ದರೋಡೆಕೋರರು ಚಿನ್ನಾಭರಣ ಮತ್ತು ನಗದು ಲೂಟಿಗೈದ ಘಟನೆ ಸಂಪಾಜೆಯ ಚಟ್ಟೆಕಲ್ಲು ಎಂಬಲ್ಲಿ ನಡೆದಿದೆ.

ಸ್ಥಳೀಯವಾಗಿ ಪುರೋಹಿತ ಮತ್ತು ಜ್ಯೋತಿಷಿಯಾಗಿ ಹೆಸರು ಗಳಿಸಿರುವ ಅಂಬರೀಶ್ ಭಟ್ ಎಂಬವರ ಮನೆಗೆ ನುಗ್ಗಿದ ತಂಡ ಕೃತ್ಯ ಎಸಗಿದೆ. ರಾತ್ರಿ 8.30 ರ ವೇಳೆಗೆ ಆಗಂತುಕರು ಎಳನೀರು ಕಡಿಯುವ ಕತ್ತಿ ಹಿಡಿದು ಮನೆಗೆ ನುಗ್ಗಿದ್ದಾರೆ. ಈ ವೇಳೆ, ಅಂಬರೀಶ್ ಭಟ್ ಮನೆಯಲ್ಲಿ ಇರಲಿಲ್ಲ.

ಎರಡು ದಿನಗಳ ಹಿಂದಷ್ಟೇ ದೊಡ್ಡ ಮಗ ಶ್ರೀವತ್ಸ ತನ್ನ ಪತ್ನಿಯ ಜೊತೆಗೆ ಮನೆಗೆ ಬಂದಿದ್ದರು. ದರೋಡೆ ಕೃತ್ಯದ ಸಂದರ್ಭದಲ್ಲಿ ಅತ್ತೆ ಮತ್ತು ಸೊಸೆ ಮಾತ್ರ ಇದ್ದರು.

ಮನೆಗೆ ನುಗ್ಗಿದ ತಂಡ, ಸೊಸೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಿತ್ತುಕೊಂಡಿದ್ದಾರೆ. ಬಳಿಕ ಕತ್ತಿ ತೋರಿಸಿ ಬೆದರಿಸಿದ್ದು ಕಪಾಟಿನ ಕೀಲಿ ಕೈ ಕೊಡುವಂತೆ ಕೇಳಿದ್ದಾರೆ. ಜೀವ ಭಯದಿಂದ ಅತ್ತೆ, ಸೊಸೆ ಕೀಯನ್ನು ಕೊಟ್ಟಿದ್ದು ಆಗಂತುಕರು ಕಪಾಟಿನಲ್ಲಿದ್ದ ಸುಮಾರು ನೂರು ಗ್ರಾಂನಷ್ಟು ಚಿನ್ನದ ಒಡವೆ, ಒಂದುವರೆ ಲಕ್ಷದಷ್ಟು ಇದ್ದ ನಗದು ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ದರೋಡೆ ತಂಡದಲ್ಲಿದ್ದವರು ತಮಿಳು ಮಾತನಾಡುತ್ತಿದ್ದರು ಎನ್ನಲಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!