Sunday, June 21, 2026
spot_imgspot_img
spot_imgspot_img

ವಿಟ್ಲ: ಪಟ್ಟಣ ಪಂಚಾಯಿತಿಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಮಾಹಿತಿ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026 ರ ನಿಯಮದಂತೆ ಬೃಹತ್ ತ್ಯಾಜ್ಯ ಉತ್ಪಾದಕರನ್ನು ನೋಂದಾಯಿಸುವ ಬಗ್ಗೆ ಬೃಹತ್ ತ್ಯಾಜ್ಯ ಉತ್ಪಾದಕರೆಂದು ಅಂದಾಜಿಸಲಾಗಿರುವ ಮದುವೆ ಸಮಾರಂಭ ನಡೆಸುವ ಹಾಲ್ ನವರಿಗೆ ಮಾಹಿತಿ ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ನಡೇಸಲಾಯಿತು.

ಮುಖ್ಯಾಧಿಕಾರಿ ಕರುಣಾಕರ ವಿ ರವರು ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026 ರ ಬಗ್ಗೆ ವಿವರವಾದ ಮಾಹಿತಿ ನೀಡಿ, ದಿನಕ್ಕೆ 100 ಕೆ.ಜಿ. ಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ತ್ಯಾಜ್ಯ ಉತ್ಪಾದಕರನ್ನು ಬೃಹತ್ ತ್ಯಾಜ್ಯ ಉತ್ಪಾದಕರೆಂದು ಈ ನಿಯಮದಲ್ಲಿ ಕಡ್ಡಾಯವಾಗಿ ನೋಂದಾಯಿಸಲು ಹಾಗೂ ಈ ನಿಯಮದಲ್ಲಿ ಬೃಹತ್ ತ್ಯಾಜ್ಯ ಉತ್ಪಾದಕರ ಪಾತ್ರದ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು ರವರು ನಿಯಮ ಪಾಲಸಿ ಪಟ್ಟಣದ ಸ್ವಚ್ಚತೆಗೆ ಸಹಕರಿಸಲು ತಿಳಿಸಿದರು. ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ ಶೆಟ್ಟಿರವರು ನಾಲ್ಕು ಬಗೆಯ ತ್ಯಾಜ್ಯ ವಿಂಗಡಣೆ ಮಾಡಿ ಪಟ್ಟಣ ಪಂಚಾಯಿತಿಗೆ ನೀಡುವಂತೆ ತಿಳಿಸಿದರು.

ಈ ಮಾಹಿತಿ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ಸಂಗೀತ ಪಾಣೆಮಜಲು ಉಪಸ್ಥಿತರಿದ್ದರು. ಆರೋಗ್ಯ ವಿಭಾಗದ ಲೋಕೇಶ್, ಲ್ಯಾನ್ಸಿ ಹಾಗೂ ಕಮ್ಯೂನಿಟಿ ಮೊಬಿಲೈಸರ್ ಗಳು ಕಾರ್ಯಕ್ರಮ ನಿರ್ವಹಿಸಿರು.

- Advertisement -

Related news

error: Content is protected !!