Tuesday, June 23, 2026
spot_imgspot_img
spot_imgspot_img

ಪುತ್ತೂರು: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಡಿದು ಮಹಿಳೆ ಮೃತ್ಯು!

- Advertisement -
- Advertisement -

ಪುತ್ತೂರು: ಕೆಯ್ಯೂರು ಗ್ರಾಮ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿದ ಪರಿಣಾಮ ಓರ್ವ ಮಹಿಳೆ ಮತಪಟ್ಟಿದ್ದಾರೆ. ಮೆ 11ರಂದು ಸ್ವಗೃಹದಲ್ಲಿ ಅವರು ನಿಧನರಾದರು.

ಎಟ್ಯಡ್ಕ ನಿವಾಸಿ ಬಾಬು ನಾಯ್ಕರ ಪತ್ನಿ ವಿಜಯ(45) ಎಂಬವರೇ ಹಾವಿನ ಕಡಿತದಿಂತ ಮೃತಪಟ್ಟವರು.

ಮೆ 8 ರಂದು ತಮ್ಮ ಮನೆಯ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿಷ ಪೂರಿತ ಹಾವು ಕಚ್ಚಲ್ಪಟ್ಟಿತ್ತು. ಇದನ್ನು ಕಂಡ ಮನೆಯವರು ಕೂಡಲೆ ಹಳ್ಳಿ ಮದ್ದು ಚಿಕಿತ್ಸೆ ಕೊಡಿಸಿ ಚೇತರಿಸಿ ಕೊಂಡಿದ್ದರು. ಗ್ರಾಮಸ್ಥರು ಆಸ್ಪತ್ರೆಗೆ ದಾಖಲಾಗಲು ಹೇಳಿದ್ದರೂ ಅದನ್ನು ನಿರ್ಲಕ್ಷಿಸಿದ್ದರು.

ಮೆ 11ರಂದು ಪರಿಸ್ಥಿತಿ ಉಲ್ಬಣಿಸಿದೆ. ಚಿಕಿತ್ಸೆ ಫಲಿಸದೆ ಅವರು ಇಂದು ಮುಂಜಾನೆ ಮೃತರಾಗಿದ್ದಾರೆ. ಮೃತರು ಗಂಡ ಬಾಬು ನಾಯ್ಕ, ಮಕ್ಕಳಾದ ಸಂಧ್ಯಾ, ಸತ್ಯ, ಸಂದೀಪ್ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

Related news

error: Content is protected !!