Tuesday, July 1, 2025
spot_imgspot_img
spot_imgspot_img

ಪುತ್ತೂರು: ಥ್ರೋಬಾಲ್‌ ಪಂದ್ಯಾಟದಲ್ಲಿ ವಿವೇಕಾನಂದ ಪದವಿ ಪೂರ್ವಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ

- Advertisement -
- Advertisement -

ಪುತ್ತೂರು :ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಗಳಿಸಿದೆ.

ಈ ಪಂದ್ಯಾಟದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸ್ಫೂರ್ತಿ ಕೆ.ಆರ್‌ ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸ್ಫೂರ್ತಿ ಕೆ.ಆರ್, ಫಾತಿಮತ್ ಅನೀಶ, ವಾಣಿಜ್ಯ ವಿಭಾಗದ ಧನುಷ, ಸಾತ್ವಿ, ಕಲಾ ವಿಭಾಗದ ಕುಸುಮ ಸಿ. ಎಂ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ತೃಪ್ತಿ ಜಿ ಆರ್, ಪುಣ್ಯಶ್ರೀ, ವಾಣಿಜ್ಯ ವಿಭಾಗದ ಶ್ರೇಯ, ವರ್ಷಿಣಿ, ದಿವ್ಯಎನ್ ಶೆಟ್ಟಿ, ಮನ್ಯ ಶೆಟ್ಟಿ,ಕಲಾ ವಿಭಾಗದ ಕೀರ್ತಿಲತಾ ಬಿ ಸಿ, ಅನನ್ಯ ಜಿ.ಕೆ ಭಾಗವಹಿಸಿದ್ದರು.

ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್‌ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

astr
- Advertisement -

Related news

error: Content is protected !!